LATEST NEWS
ತುಂಬೆ ಅಣೆಕಟ್ಟಿನ ನೀರಿನ ಮಟ್ಟ ಇಳಿಕೆ – ಮಳೆ ಬರದಿದ್ದರೆ ಎಎಂಆರ್ ನಿಂದ ನೀರು
ಮಂಗಳೂರು ಮಾರ್ಚ್ 25: ಬೇಸಿಗೆ ಪ್ರಾರಂಭವಾದ ಬೆನ್ನಲ್ಲೆ ತುಂಬೆ ಅಣೆಕಟ್ಟಿನ ನೀರಿನ ಮಟ್ಟ ಇಳಿಕೆಯಾಗಿದ್ದು, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ.
ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಒಂದೊಮ್ಮೆ ನೀರಿನ ಮಟ್ಟ ನಾಲ್ಕು ಮೀಟರ್‌ಗೆ ಇಳಿಕೆಯಾದರೆ ಎಎಂಆರ್ ಅಣೆಕಟ್ಟೆಯಿಂದ ತುಂಬೆ ಅಣೆಕಟ್ಟೆಗೆ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮೇಯರ್ ಜಯಾನಂದ ಅಂಚನ್ ಹೇಳಿದರು.
ಶುಕ್ರವಾರ ತುಂಬೆಯಲ್ಲಿ ನೀರಿನ ಮಟ್ಟ 4.69 ಮೀಟರ್‌ಗೆ ಇಳಿಕೆಯಾಗಿತ್ತು. ಮಳೆ ಬರದಿದ್ದರೆ ಇನ್ನಷ್ಟು ಇಳಿಕೆಯಾಗುವ ಸಂಭವ ಇದೆ. ಹೀಗಾಗಿ, ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಲಾಗಿದೆ. ಶಂಭೂರಿನ ಎಎಂಆರ್ ಅಣೆಕಟ್ಟೆಯಿಂದ ನೀರು ತಂದರೆ ಮುಂದಿನ 45 ದಿನಗಳವರೆಗೆ ನೀರಿನ ಸಮಸ್ಯೆ ಆಗದೆಂದು ಅಂದಾಜಿಸಲಾಗಿದೆ. ಆದರೆ, ಏಪ್ರಿಲ್ ಅಂತ್ಯದವರೆಗೆ ರೇಷನಿಂಗ್ ವ್ಯವಸ್ಥೆ ಜಾರಿಗೊಳಿಸುವ ವಿಚಾರ ಇಲ್ಲ’ ಎಂದರು.