LATEST NEWS
ಕೇರಳದಿಂದ ಕರ್ನಾಟಕಕ್ಕೆ ಬರಲು ಆರ್ಟಿಪಿಸಿಆರ್ ಟೆಸ್ಟ್ ವರದಿ ಬೇಕಾಗಿಲ್ಲ

ಮಂಗಳೂರು ಫೆಬ್ರವರಿ 17: ಕೊನೆಗೂ ಕೇರಳದ ಜನತೆಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದ್ದು, ಕೊರೊನಾ ಪ್ರಕರಣಗಳು ಇಳಿಕೆಯಾದ ಹಿನ್ನಲೆ ಗೋವಾ ಮತ್ತು ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ಬೇಕಾಗಿಲ್ಲ ಎಂದು ಸರ್ಕಾರ ಈಗ ಸುತ್ತೋಲೆ ಹೊರಡಿಸಿದೆ
ಕೊರೊನಾ ಪ್ರಕರಣ ಕಡಿಮೆಯಾಗಿರುವ ಹಿನ್ನಲೆ ಸರ್ಕಾರ ಕೂಡ ಕೋವಿಡ್ ಪರಿಸ್ಥಿತಿ ನಿಭಾಯಿಸಲು ವಿಧಿಸಿದ್ದ ನಿರ್ಬಂಧಗಳನ್ನು ಒಂದೊಂದಾಗಿ ತೆಗೆಯುತ್ತ ಬಂದಿದ್ದು, ಈಗ ಮತ್ತೊಂದು ನಿರ್ಬಂಧವನ್ನು ವಾಪಸ್ ಪಡೆದುಕೊಂಡಿದೆ. ನೆರೆಯ ಗೋವಾ ಹಾಗೂ ಕೇರಳಗಳಲ್ಲಿ ಕರೊನಾ ಪ್ರಕರಣಗಳು ಅತಿಯಾಗಿ ವರದಿಯಾಗಿದ್ದರ ಹಿನ್ನೆಲೆಯಲ್ಲಿ ಆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರ ಬಳಿ ಆರ್ಟಿಪಿಸಿಆರ್ ಟೆಸ್ಟ್ನ ನೆಗೆಟಿವ್ ವರದಿ ಇರಬೇಕು ಎಂಬ ನಿರ್ಬಂಧ ವಿಧಿಸಿತ್ತು.

ಆದರೆ ಕೋವಿಡ್ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಗೋವಾ ಮತ್ತು ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ಬೇಕಾಗಿಲ್ಲ ಎಂದು ಸರ್ಕಾರ ಈಗ ಸುತ್ತೋಲೆ ಹೊರಡಿಸಿದೆ. ಇದು ರಸ್ತೆ, ರೈಲು ಅಥವಾ ವಾಯುಮಾರ್ಗದ ಮೂಲಕ ಬರುವ ಎಲ್ಲ ಪ್ರಯಾಣಿಕರು ಅನ್ವಯಿಸಲಿದೆ. ಆದರೆ ಅಂಥವರು ಎರಡೂ ಡೋಸ್ ಲಸಿಕೆ ತೆಗೆದುಕೊಂಡಿರಬೇಕಾದ್ದು ಕಡ್ಡಾಯ, ಲಸಿಕೀಕರಣದ ಪ್ರಮಾಣಪತ್ರ ಇರಲೇಬೇಕು ಎಂಬುದನ್ನು ಒತ್ತಿ ಹೇಳಿದೆ.