Connect with us

LATEST NEWS

ರಕ್ಷಕರಿಗೆ ರಕ್ಷಣೆ ಇಲ್ಲ: ಗನ್ ತೋರಿಸಿ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರ ಮಾಡಿದ ಎಸ್​​ಐ

ಭೂಪಾಲಪಲ್ಲಿ, ಜೂನ್ 20: ತೆಲಂಗಾಣದಲ್ಲಿ ಸಾರ್ವಜನಿಕರನ್ನು ರಕ್ಷಣೆ ಮಾಡುವ ಪೊಲೀಸರ ಮೇಲೆಯೇ ಅತ್ಯಾಚಾರ ಮಾಡಿರುವ ಅವಮಾನೀಯ ಘಟನೆಯೊಂದು ನಡೆದಿದೆ. ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯಲ್ಲಿ ಮಹಿಳಾ ಹೆಡ್ ಕಾನ್‌ಸ್ಟೆಬಲ್​​​ಗೆ ಗನ್ ತೋರಿಸಿ ಅತ್ಯಾಚಾರ ಮಾಡಲಾಗಿದೆ.

ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಬುಧವಾರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಂಧಿಸಲಾಗಿದೆ. ಇದರ ಜತೆಗೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳಾ ಹೆಡ್ ಕಾನ್‌ಸ್ಟೆಬಲ್ ದೂರ ಆಧಾರ ಮೇಲೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ಹಿರಿಯ ಅಧಿಕಾರಿಗಳು ನಡೆಸಲಾಗಿದ್ದು, ಮಹಿಳಾ ಹೆಡ್ ಕಾನ್‌ಸ್ಟೆಬಲ್ ಆರೋಪ ದೃಢಪಟ್ಟಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಕಾಳೇಶ್ವರಂ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಾನಿ ಸೇನ್ ಎಂಬು ಸಬ್ ಇನ್ಸ್‌ಪೆಕ್ಟರ್ ಈ ಕೃತ್ಯವನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ. ಆಕೆ ನೀಡಿದ ದೂರಿನಲ್ಲಿ ಜೂನ್ 16 ರಂದು ನೀರಾವರಿ ಯೋಜನೆಯ ವಸತಿ ಸೌಲಭ್ಯದ ಅತಿಥಿ ಕೊಠಡಿಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿದ್ದಾರೆ. ಎಸ್‌ಐ ರಿವಾಲ್ವರ್ ತೋರಿಸಿ ಬೆದರಿಸಿ ಅತ್ಯಾಚಾರವೆಸಗಿದ್ದಾನೆ. ನಂತರ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾನೆ ಎಂದು ಹೆಡ್ ಕಾನ್‌ಸ್ಟೆಬಲ್ ಆರೋಪಿಸಿದರು.

ಸಬ್ ಇನ್ಸ್ ಪೆಕ್ಟರ್ ಭವಾನಿ ಸೇನ್ ವಿರುದ್ಧದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಮಹಾನಿರೀಕ್ಷಕ (ಮಲ್ಟಿ ಝೋನ್ -1) ಎ.ವಿ.ರಂಗನಾಥ್, ಭವಾನಿ ಸೇನ್ ಅವರನ್ನು ಸೇವೆಯಿಂದ ಶಾಶ್ವತವಾಗಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಾನ್‌ಸ್ಟೆಬಲ್ ದೂರಿನ ಆಧಾರದ ಮೇಲೆ ಎಸ್‌ಐ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸಬ್ ಇನ್ಸ್ ಪೆಕ್ಟರ್ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಈ ಹಿಂದೆ ಮೂವರು ಮಹಿಳಾ ಪೇದೆಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಈ ಹಿಂದೆ ಎಸ್‌ಐ ವಿರುದ್ಧ ಜುಲೈ 2022 ರಲ್ಲಿ ಆಸಿಫಾಬಾದ್ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಎಸ್‌ಐ ಹೀಗೆ ಮಹಿಳಾ ಅಧಿಕಾರಿಗಳಿ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದಲ್ಲಿ ತೊಡಗಿರುವುದು ರಾಜ್ಯ ಪೊಲೀಸರ ಇಲಾಖೆಗೆ ಧಕ್ಕೆ ತರುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *