LATEST NEWS
ನಿಜಾಮುದ್ದೀನ್ ಮಸೀದಿಯ ಸಮಾವೇಶದಲ್ಲಿ ಉಡುಪಿಯ ಯಾರೂ ಭಾಗವಹಿಸಿಲ್ಲ

ನಿಜಾಮುದ್ದೀನ್ ಮಸೀದಿಯ ಸಮಾವೇಶದಲ್ಲಿ ಉಡುಪಿಯ ಯಾರೂ ಭಾಗವಹಿಸಿಲ್ಲ
ಉಡುಪಿ ಎಪ್ರಿಲ್ 1: ದೆಹಲಿಯ ನಿಜಾಮುದ್ದೀನ್ ಮಸೀದಿಯ ಸಮಾವೇಶದಲ್ಲಿ ಉಡುಪಿಯ ಯಾರೂ ಕೂಡ ಭಾಗವಹಿಸಿಲ್ಲ. ಜಿಲ್ಲೆಯ ಜನ ಈ ಬಗ್ಗೆ ಗಾಬರಿಯಾಗೋ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲೆಯಿಂದಲೂ ಹಲವರು ಮಂದಿ ಭಾಗಿಯಾಗಿದ್ದರು ಎಂಬ ವದಂತಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಡುತ್ತಿದೆ. ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟಡಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಮೂವರಲ್ಲಿ ಮಾತ್ರ ಸೋಂಕು ದೃಢವಾಗಿದೆ.ಅವರನ್ನು ಮತ್ತವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಿದ್ದೇವೆ. ಗಾಳಿ ಸುದ್ದಿಗಳಿಗೆ ಕಿವಿಗೊಡದೆ ಜನ ಲಾಕ್ ಡೌನ್ ಗೆ ಶಾಂತಿಯುತವಾಗಿ ಸಹಕರಿಸಬೇಕು ಜಿಲ್ಲಾಧಿಕಾರಿಯವರು ಮನವಿ ಮಾಡಿದ್ದಾರೆ.
ಕೊರೊನಾ ಮುಂಜಾಗೃತಾ ಕ್ರಮವಾಗಿ ಲಾಕ್ ಡೌನನ್ನು ಉಡುಪಿಯಲ್ಲಿ ಕಟ್ಟು ನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ದಿನಾ ಬೆಳಿಗ್ಗೆ 11 ಗಂಟೆ ವರೆಗೆ ವರೆಗೆ ಮಾತ್ರ ದಿನಸಿ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಿಗ್ಗೆ 11 ಗಂಟೆಯ ಬಳಿಕ ಮನೆಯಿಂದ ರಸ್ತೆಗಿಳಿಯಲು ಜಿಲ್ಲಾಡಳಿತ ಸಂಪೂರ್ಣ ನಿರ್ಬಂಧ ಹೇರಿದೆ. ಇನ್ನು ಸೊಂಕು ಹರಡದಂತೆ ಮನೆಯಿಂದ ಹೊರ ಬಾರದೆ ಸಹಕರಿಸಿ ಎಂ ಜಿಲ್ಲಾಡಳಿತದ ಮನವಿಗೆ ಉಡುಪಿ ಜನತೆ ಸಂಪೂರ್ಣ ಸಹಕಾರ ನೀಡುತ್ತಿದೆ.
