ಕೊರೊನಾದಿಂದಾಗಿ ಆಹಾರವಿಲ್ಲದಂತಾದ ಗೂಬೆ

ಪುತ್ತೂರು ಎಪ್ರಿಲ್ 1: ದೇಶದಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹಳಷ್ಟು ಜನ ದೂರ ದೂರಿನಲ್ಲಿ ಸಂಕಷ್ಟಕ್ಕೆ ಸಿಲುಕಿ, ಅನ್ನ ಆಹಾರ ವಿಲ್ಲದೆ ಪರದಾಡುತ್ತಿದ್ದು ಅವರಿಗೆ ಪೊಲೀಸರು,ಇಲಾಖಾ ಸಿಬ್ಬಂದಿಗಳು,ಸಂಘ ಸಂಸ್ಥೆಗಳು ಆಹಾರ ಪೂರೈಸಿದ ಘಟನೆ ಯನ್ನು ಕಾಣುತ್ತಿದ್ದೇವೆ.

ಆದರೆ ಇಲ್ಲೊಂದು ಕಡೆ ಪಕ್ಷಿ ಯೊಂದು ಆಹಾರವಿಲ್ಲದೆ ಜನ ವಾಸ್ತವ್ಯವನ್ನು ಹುಡುಕಿಕೊಂಡು, ಮನೆಯ ಬಳಿ ವಾಸ ಮಾಡಿಕೊಂಡಿದೆ. ಹೌದು, ಇದು ಪುತ್ತೂರು ತಾಲೂಕಿನ ಬಪ್ಪಳಿಗೆ ಸಮೀಪ ಅವಿನಾಶ್ ಎಂಬವರ ಮನೆಯ ಬಳಿ ನಡೆದ ಘಟನೆ, ನಿನ್ನೆಯಿಂದ ಗೂಬೆ ಮರಿ ಯೊಂದು ಇವರ ಮನೆ ಪಕ್ಕದಲ್ಲಿಯೇ ವಾಸ ಸ್ಥಾನವನ್ನಾಗಿ ಮಾಡಿಕೊಂಡಿದೆ, ಗೂಬೆಯ ಆರೈಕೆಯನ್ನು ಅಲ್ಲಿನ ನಿವಾಸಿಗಳು ಮಾಡುತ್ತಿದ್ದಾರೆ, ಗೂಬೆ ಗೆ ನೀರು, ಹಣ್ಣು ಗಳನ್ನು ನೀಡಿ ಸಲಹುತ್ತಿದ್ದಾರೆ.