KARNATAKA
ಲಾಕ್ ಡೌನ್ ನಿಂದ ಕೊರೊನಾ ಸೊಂಕು ಹೋಗಲ್ಲ – ಆರೋಗ್ಯ ಸಚಿವ ಡಾ. ಕೆ.ಸುಧಾಕರ್

ಬೆಂಗಳೂರು ಜನವರಿ 14: ಲಾಕ್ ಡೌನ್ ಜಪ ಮಾಡುತ್ತಿದ್ದ ರಾಜ್ಯ ಸರಕಾರಕ್ಕೆ ಪ್ರಧಾನಿ ಮೋದಿ ಸೂಚನೆ ಬಳಿಕ ಇದೀಗ ಲಾಕ್ ಡೌನ್ ಮಾತನ್ನು ತೆಗೆದು ಹಾಕಿದ್ದು, ಲಾಕ್‌ಡೌನ್‌ನಿಂದ ಸೋಂಕು ನಿಯಂತ್ರಣ ಆಗಲ್ಲ. ರಾಜ್ಯದಲ್ಲಿ ಲಾಕ್‌ಡೌನ್ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಲಾಕ್‌ಡೌನ್ ಮಾಡುವುದರಿಂದ ಕೊರೊನಾ ಸೋಂಕು ನಿಯಂತ್ರಣ ಆಗುವುದಿಲ್ಲ. ಈಗಾಗಲೇ ಎರಡು ಬಾರಿ ಲಾಕ್‌ಡೌನ್ ಮಾಡಿ ಜನರಿಗೆ ಸಮಸ್ಯೆ ಆಗಿದೆ. ನಿನ್ನೆ ಮೋದಿ ಅವರು ಕೂಡಾ ಆರ್ಥಿಕ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಹೀಗಾಗಿ ಲಾಕ್‌ಡೌನ್‌ನಂತಹ ನಿಯಮ ಇಲ್ಲದೆ ಅಗತ್ಯ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ. ಲಸಿಕೆ ತೆಗೆದುಕೊಳ್ಳಿ, ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿ. ಬಹಿರಂಗ ಸಮಾವೇಶ, ಗುಂಪು ಸೇರುವುದು ಮಾಡಬೇಡಿ. ಒಂದೂವರೆ ತಿಂಗಳು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

ಇಂದಿನಿಂದ ಎರಡನೇ ವಾರದ ವೀಕೆಂಡ್ ಕರ್ಫ್ಯೂ ಜಾರಿ ವಿಚಾರವಾಗಿ ಮಾತನಾಡಿ, ಈ ತಿಂಗಳು ನಿಯಮ ಮುಂದುವರೆಯುತ್ತದೆ. ಇವತ್ತು ಎರಡನೇ ವೀಕೆಂಡ್ ಕರ್ಫ್ಯೂ ಜಾರಿ ಆಗಲಿದೆ. ಜನ ಸಹಕಾರ ನೀಡಬೇಕು. ಅನೇಕ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದೆ. ಯಾರು ಕೂಡ ಉದಾಸೀನ ಮಾಡಬಾರದು ಎಂದರು.