Connect with us

    LATEST NEWS

    ಟ್ವಿಟ್ಟರ್ ಖರೀದಿ ಬೆನ್ನಲ್ಲೆ ..ಇನ್ನು ಟ್ವಿಟ್ಟರ್ ಉಚಿತ ಅಲ್ಲ ಎಂದ ಎಲಾನ್ ಮಸ್ಕ್

    ವಾಷಿಂಗ್ಟನ್: ಟ್ವಿಟ್ಟರ್ ನ್ನು ಖರೀದಿಸಿದ ಬೆನ್ನಲ್ಲೆ ಇದೀಗ ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ಟ್ವಿಟ್ಟರ್ ಬಳಕೆದಾರರಿಗೆ ಶಾಕ್ ನೀಡಿದ್ದು, ಇನ್ನು ವಾಣಿಜ್ಯ ಹಾಗೂ ಸರ್ಕಾರಿ ಬಳಕೆಗೆ ಟ್ವಿಟ್ಟರ್ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಸಾಮಾನ್ಯ ಬಳಕೆದಾರರಿಗೆ ಟ್ವಿಟ್ಟರ್ ಸಂಪೂರ್ಣ ಉಚಿತವಾಗಿದೆ. ಆದರೆ ಇನ್ನು ಮುಂದೆ ವಾಣಿಜ್ಯ ಹಾಗೂ ಸರ್ಕಾರಿ ಬಳಕೆದಾರರಿಗೆ ಶುಲ್ಕವನ್ನು ವಿಧಿಸಬಹುದು ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.


    ಕಳೆದ ತಿಂಗಳ ಪ್ರಾರಂಭದಲ್ಲಿ ಮಸ್ಕ್ ಟ್ವಿಟ್ಟರ್‌ನ ಶೇ.9.2 ರಷ್ಟು ಪಾಲನ್ನು ಖರೀದಿಸಿ, ಜೊತೆ ಜೊತೆಗೆ ಹೊಸ ಎಡಿಟ್ ಬಟನ್ ಫೀಚರ್ ಅನ್ನು ತರುವ ಬಗ್ಗೆಯೂ ತಿಳಿಸಿದ್ದರು. ಇದಾದ ಬೆನ್ನಲೇ ಅವರು ಟ್ವಿಟ್ಟರ್ ಮಂಡಳಿಯ ಭಾಗವಲ್ಲ ಎಂಬುದಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಾಗ್ ಅಗರ್ವಾಲ್ ತಿಳಿಸಿದ್ದರು. ಇದಾದ ಬಳಿಕ ಮಸ್ಕ್ 44 ಬಿಲಿಯನ್ ಡಾಲರ್(3.36 ಲಕ್ಷ ಕೋಟಿ ರೂ.)ಗೆ ಟ್ವಿಟ್ಟರ್‌ನ ಶೇ.100 ರಷ್ಟು ಪಾಲನ್ನು ಖರೀದಿಸುವ ಆಫರ್ ನೀಡಿ, ನೋಡ ನೋಡುತ್ತಿದ್ದಂತೆ ಸಂಪೂರ್ಣ ಒಡೆತನವನ್ನು ಸಾಧಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply