KARNATAKA
ಕೊರೊನಾ ವಿರುದ್ದ ಹೋರಾಡಲು ಬೆಂಗಳೂರಿನಲ್ಲಿ ವೈದ್ಯರೆ ಇಲ್ಲ….!!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿ ದಿನ ಮಹಾಮಾರಿ ಕೊರೊನಾಗೆ ಹೆಣ ಬೀಳುತ್ತಲೇ ಇದ್ದು, ಇಲ್ಲಿನ ನರಕ ಬದುಕಿನ ಕರಾಳ ಸತ್ಯವನ್ನು ವೈದ್ಯರೊಬ್ಬರು ಬಿಚ್ಚಿಟ್ಟಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್ ಐಸಿಯುನಲ್ಲಿ ಎಲ್ಲಾ ಸಿದ್ದತೆಗಳಿದ್ದರೂ ರೋಗಿಗಳನ್ನು ರಕ್ಷಿಸಲು ವೈದ್ಯರಿಲ್ಲದೆ ಪರದಾಡುತ್ತಿರುವುದನ್ನು ಆ ಆಸ್ಪತ್ರೆಯ ಎಂಡಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಈಗ ನಮ್ಮ ಕಾರ್ಯಕ್ಷಮತೆ, ಕಾಳಜಿ ತೋರಿಸೋ ಸಮಯ. ಸೇನೆಯವರಿಗೆ ತಮ್ಮ ಕಾರ್ಯ ತೋರಿಸೋ ಸಮಯ ಬರುತ್ತೆ. ಪೊಲೀಸ್, ಅಗ್ನಿಶಾಮಕದವರಿಗೂ ತಮ್ಮ ಕಾರ್ಯ ತೋರಿಸೋ ಸಮಯ ಬರುತ್ತೆ. ಇದೀಗ ನಮ್ಮ ಸಮಯ. ಈಗ ಡಾಕ್ಟರ್‍ಗಳ ಸರದಿ ಬಂದಿದೆ. ವೈದ್ಯರುಗಳೇ ಇಂತಹ ಸಂದರ್ಭಗಳಲ್ಲಿ ನಮ್ಮ ಮಾನವೀಯತೆಯಿಂದ ಕಾರ್ಯಕ್ಷಮತೆಯನ್ನು ತೋರಿಸೋಣ. ಇಲ್ಲಿರೋದು ನಮ್ಮ ತಾಯಿ, ಅಣ್ಣ, ತಂದೆ ಅಂತ ಅಂದುಕೊಳ್ಳೋಣ. ನಾವೀಗ ಸಹಾಯ ಮಾಡಬೇಕಿದೆ, ಎದ್ದೇಳೋಣ. ನಮ್ಮ ಅಕ್ಕರೆಯನ್ನು ಜನ್ರಿಗೆ ಕೊಟ್ಟು ಉಳಿಸೋಣ ಎಂದು ವೈದ್ಯ ಕೈ ಮುಗಿದು ಬೇಡಿಕೊಂಡಿದ್ದಾರೆ.