KARNATAKA
ಪದವಿ ಅಗತ್ಯವಿಲ್ಲ, 4 ವರ್ಷ ಅನುಭವವಿದ್ದರೆ 1 ಕೋಟಿ ರೂ ಸಂಬಳ, ಬೆಂಗಳೂರಿನಲ್ಲಿದೆ ಉದ್ಯೋಗವಕಾಶ

ಬೆಂಗಳೂರು, ಜುಲೈ 08: ಐಟಿ ಬಿಟಿ ಸಂಸ್ಥೆಗಳು, ಖಾಸಗಿ ಕಂಪೆನಿಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಸಿಗಬೇಕೆಂದು ಹೆಚ್ಚಿನವರು ಬಯಸುತ್ತಾರೆ. ಬೆಂಗಳೂರಿನಲ್ಲಿ ಖಾಲಿಯಿರುವ ಟೆಕ್ ಲೀಡ್ ಹುದ್ದೆಗೆ ಸ್ಮಾಲೆಸ್ಟ್ ಎಐನ ಸಂಸ್ಥಾಪಕಸುದರ್ಶನ್ ಕಾಮತ್ ಅವರು ಅಭ್ಯರ್ಥಿಯನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ.
ಈ ವೇಳೆಯಲ್ಲಿ ವಿಶೇಷ ಆಫರ್ ನೀಡಿದ್ದು, ಸಿವಿ ಅಗತ್ಯವಿಲ್ಲ ಎನ್ನುವುದನ್ನು ಉಲ್ಲೇಖಿಸಿದ್ದಾರೆ. ಉದ್ಯೋಗಿಗಳಿಗೆ ಏನೆಲ್ಲಾ ಅರ್ಹತೆ ಇರಬೇಕು ಹಾಗೂ ಸಂಬಳವೆಷ್ಟು ಎನ್ನುವುದನ್ನು ಈ ಪೋಸ್ಟ್‌ನಲ್ಲಿದೆ. ಸ್ಮಾಲೆಸ್ಟ್ ಎಐನ ಸಂಸ್ಥಾಪಕ ಸುದರ್ಶನ ಕಾಮತ್ ಅವರು @kamath sutra ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರು ಕಂಪನಿಗೆ ಫುಲ್ ಟೈಮ್ ಸ್ಟಾಕ್ ಲೀಡ್ ನೇಮಿಸಿಕೊಳ್ಳಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಈ ಹುದ್ದೆಯೂ ಖಾಲಿಯಿದೆ. ಅಭ್ಯರ್ಥಿಗೆ ಒಂದು ಕೋಟಿ ರೂ ಸಂಬಳ ನೀಡುವುದಾಗಿ ತಿಳಿಸಿದ್ದು, ಯಾವುದೇ ಪದವಿ ಹಾಗೂ ಸಿವಿ ಅಗತ್ಯವಿಲ್ಲ ಎಂದು ಇಲ್ಲಿ ಉಲ್ಲೇಖಿಸಿದ್ದಾರೆ. 60 ಲಕ್ಷ – ವಾರ್ಷಿಕ ವೇತನ, 40 ಲಕ್ಷ ಹೆಚ್ಚುವರಿ ಕಂಪನಿ ಪ್ರಯೋಜನಗಳು ಸಿಗಲಿದೆ. ತಕ್ಷಣವೇ ನೇಮಕಾತಿ ಪ್ರಕ್ರಿಯೆ ಇರಲಿದ್ದು, ಇದು ಸಂಪೂರ್ಣ ಕಚೇರಿ ಆಧಾರಿತ ಕೆಲಸವಾಗಿದೆ, ವಾರದಲ್ಲಿ ಐದು ದಿನಗಳು ಮಾತ್ರ ಅಭ್ಯರ್ಥಿಗಳು ಕೆಲಸ ಮಾಡಬೇಕು.
ಅಭ್ಯರ್ಥಿಗಳು ಕನಿಷ್ಠ 4-5 ವರ್ಷ ಅನುಭವದೊಂದಿಗೆ, ನೆಕ್ಸ್ಟ್ ಜೆಎಸ್, ಪೈಥಾನ್ ಮತ್ತು ರಿಯಾಕ್ಟ್ ಜೆಎಸ್‌ನೊಂದಿಗೆ ಕೋಡಿಂಗ್ ಕುರಿತು ತಿಳಿದಿರಬೇಕು. “ಪಿಎಸ್ – 0 ರಿಂದ 100 ರವರೆಗಿನ ಸಿಸ್ಟಮ್ ಸ್ಕೇಲಿಂಗ್ ಸಿಸ್ಟಮ್‌ಗಳೊಂದಿಗೆ ಕೆಲಸ ಮಾಡಿದ ಅನುಭವವು ಒಂದು ಟನ್ ಬೋನಸ್ ಅಂಕಗಳನ್ನು ನೀಡುತ್ತದೆ. ಕ್ರ್ಯಾಕ್ಡ್ ಫುಲ್ ಸ್ಟ್ಯಾಕ್ ಲೀಡ್’ ಶೀರ್ಷಿಕೆಯೊಂದಿಗೆ 100 ಪದಗಳನ್ನು ಒಳಗೊಂಡ ಅಭ್ಯರ್ಥಿಯ ಕಿರು ಪರಿಚಯವನ್ನು [email protected] ಗೆ ಕಳುಹಿಸಿ ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಜುಲೈ 7 ರಂದು ಶೇರ್ ಮಾಡಲಾದ ಈ ಪೋಸ್ಟ್ ಹಲವರು ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, 4-5 ವರ್ಷಗಳ ಅನುಭವಕ್ಕಾಗಿ 60 ಲಕ್ಷ ಆದಾಯವು ಇಂದಿನ ಮಾರುಕಟ್ಟೆಯಲ್ಲಿ ಪ್ರಮಾಣಿತವಾಗಿದೆ. ಉನ್ನತ ಶ್ರೇಣಿಯ ಡೆವಲಪರ್ ಗಳನ್ನು ಆಕರ್ಷಿಸಲು ಸಾಕಾಗುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಬ್ರಹ್ಮಚಾರಿಗೆ ತಿಂಗಳಿಗೆ 3.4 ಲಕ್ಷ ಸಂಬಳ, ವಿವಾಹಿತರಿಗೆ ಇದು ಒಳ್ಳೆಯ ಆಯ್ಕೆ ಎಂದಿದ್ದಾರೆ. ಮತ್ತೊಬ್ಬರು, ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯ ಅವಕಾಶ, ಅರ್ಹ ವ್ಯಕ್ತಿಗಳು ಸದುಪಯೋಗಪಡಿಸಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.