LATEST NEWS
“ನಾಳೆಯ ಭಾರತ್ ಬಂದ್ ಗೆ ನಮ್ಮ ಬೆಂಬಲವಿಲ್ಲ” ಮಂಗಳೂರಿನಲ್ಲಿ ರಾರಾಜಿಸುತ್ತಿರುವ ಪೋಸ್ಟರ್
“ನಾಳೆಯ ಭಾರತ್ ಬಂದ್ ಗೆ ನಮ್ಮ ಬೆಂಬಲವಿಲ್ಲ” ಮಂಗಳೂರಿನಲ್ಲಿ ರಾರಾಜಿಸುತ್ತಿರುವ ಪೋಸ್ಟರ್
ಮಂಗಳೂರು ಸೆಪ್ಟೆಂಬರ್ 9: ಕಾಂಗ್ರೇಸ್ ಕರೆ ನೀಡಿರುವ ಭಾರತ್ ಬಂದ್ ಗೆ ಮಂಗಳೂರು ನಗರದಲ್ಲಿ ಕೆಲವೆಡೆ ಬಂದ್ ಗೆ ಬೆಂಬಲ ನೀಡದಿರಲು ತೀರ್ಮಾನಿಸಲಾಗಿದೆ. ನಗರದ ಹಂಪನಕಟ್ಟೆ, ರಥ ಬೀದಿ , ಬಂದರ್ ನ ಕೆಲಭಾಗ ಸೇರಿದಂತೆ ಇನ್ನಿತರ ಕಡೆ ಬಂದ್ ಗೆ ಬೆಂಬಲವಿಲ್ಲ ಎನ್ನುವ ಬರಹಗಳು ಪೋಸ್ಟರ್ ರಾರಾಜಿಸ ತೊಡಗಿವೆ.
” ನಾಳೆಯ ಭಾರತ್ ಬಂದ್ ಗೆ ನಮ್ಮ ಬೆಂಬಲವಿಲ್ಲ ಸೆಪ್ಟೆಂಬರ್ 10 ರಂದು ನಮ್ಮ ಅಂಗಡಿ ಎಂದಿಗಿಂತಲೂ ಒಂದು ಗಂಟೆ ಹೆಚ್ಚು ತೆರೆದಿರುತ್ತದೆ ಎಂದು ಬರೆದ ಪೋಸ್ಟರ್ ಗಳನ್ನು ಅಂಗಡಿಗಳ ಮುಂದೆ ಅಂಟಿಸಲಾಗಿದೆ.
ಭಾರತ ಬಂದ್ ಸಂದರ್ಭದಲ್ಲಿ ನಾವು ಅಂಗಡಿ ಮುಂಗಟ್ಟು ತೆರೆದಿಟ್ಟು ವ್ಯಾಪಾರ ನಡೆಸಲು ನಿರ್ಧರಿಸಿದ್ದೇವೆ ಎಂದು ಓಲ್ಡ್ ಬಂದರ್ ಹೋಲ್ ಸೇಲ್ ಕಿರಾಣಿ ಅ್ಯಂಡ್ ಅಲೈಟ್ ಮಾರ್ಚ್ಂಟ್ಸ್ ಅಸೋಸಿಯೇಷನ್ ಘೋಷಿಸಿದೆ .
ನಾಳೆ ಭಾರತ್ ಬಂದ್ ರಾಜಕೀಯ ಪ್ರೇರಿತ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ಆರೋಪಿಸಿದೆ. ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಜನತಾ ದಳ ಮೈತ್ರಿ ಸರ್ಕಾರ ಇಂಧನ ಬೆಲೆಯಲ್ಲಿ ಕಳೆದ ಬಾರಿ 2 ರೂಪಾಯಿ ಹೆಚ್ಚಿಸಿ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದೆ. ಈ ಕುರಿತು ಕಣ್ಣು ಮುಚ್ಚಿ ಕುಳಿತ ಕಾಂಗ್ರೆಸ್ ಮುಖಂಡರು ನಾಳೆ ಬಂದ್ ಕರೆ ನೀಡಿರುವುದು ರಾಜಕೀಯ ಪ್ರೇರಿತ ಎಂದು ಆರೋಪಿಸಿದೆ.