LATEST NEWS
ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನ ಪಡೆದ ನವಮಂಗಳೂರು ಬಂದರು

ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನ ಪಡೆದ ನವಮಂಗಳೂರು ಬಂದರು
ಮಂಗಳೂರು ಎಪ್ರಿಲ್ 6: ಮಂಗಳೂರಿನ ನವಮಂಗಳೂರು ಬಂದರು ದೇಶದ ಅತ್ಯಂತ ಸ್ವಚ್ಚ ಬಂದರು ಪ್ರಶಸ್ತಿಗೆ ಪಾತ್ರವಾಗಿದೆ. ದೇಶದ ಪ್ರಮುಖ 12 ಬಂದರುಗಳ ಪೈಕಿ ಮಂಗಳೂರು ಬಂದರು ಪ್ರಥಮ ಸ್ಥಾನವನ್ನು ಪಡೆದಿದೆ.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರದ ಬಂದರು ಸಚಿವಾಲಯ ನಿಯೋಜಿಸಿರುವ ಕ್ವಾಲಿಟಿ ಕೌನ್ಸಿಲ್ ಆಪ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ನವಮಂಗಳೂರು ಬಂದರು ಅತೀ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನವನ್ನು ಪಡೆದಿದೆ.
2017-18ರ ಸಾಲಿನಲ್ಲಿ ದೇಶದ ಎಲ್ಲಾ ಪ್ರಮುಖ ಬಂದರುಗಳಿಗೆ ಕೇಂದ್ರ ಬಂದರು ಸಚಿವಾಲಯ ಸ್ವಚ್ಚಭಾರತ್ ಅಭಿಯಾನದಡಿಯಲ್ಲಿ 37 ಅಂಕಗಳನ್ನು ನಿಗದಿ ಪಡಿಸಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಗಳಲ್ಲಿ ನವ ಮಂಗಳೂರು ಬಂದರು ಮಂಡಳಿ ಅತ್ಯುತ್ತಮ ರೀತಿಯಲ್ಲಿ ಹಮ್ಮಿಕೊಳ್ಳುವ ಮೂಲಕ ಮೂಲಕ ದೇಶದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದಿದೆ.

ಕೇಂದ್ರ ಬಂದರು ಸಚಿವಾಲಯ ನಿರೂಪಿಸಿದ ಕಾರ್ಯಕ್ರಮಗಳಲ್ಲಿ ಕೆಲಸದ ಸ್ಥಳಗಳ ಸ್ವಚ್ಚತೆ, ಶೆಡ್ ಗಳ ರಿಪೇರಿ ಹಾಗೂ ಸ್ವಚ್ಚತೆ, ಕಚೇರಿ ಗಳ ಸ್ವಚ್ಚತೆ ಹಾಗೂ ನೌಕರರ ಮನೆಗಳ ಸುತ್ತಮುತ್ತಲಿನ ಸ್ಚಚ್ಚತೆ ಈ ಎಲ್ಲಾ ಕೆಟಗರಿಯಲ್ಲಿ ನವಮಂಗಳೂರು ಬಂದರು ಕೇಂದ್ರ ಸಚಿವಾಲಯ ನಿಗದಿ ಪಡಿಸಿದ ಅಂಕಗಳಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದಿದೆ.
ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಬಂದರು ಸಚಿವಾಲಯ ನಿಯೋಜಿಸಿರುವ ಕ್ವಾಲಿಟಿ ಕೌನ್ಸಿಲ್ ಆಪ್ ಇಂಡಿಯಾ ನವಮಂಗಳೂರು ಬಂದರನ್ನು ದೇಶದ 12 ಪ್ರಮುಖ ಬಂದರುಗಳಲ್ಲಿ ಸ್ವಚ್ಚ ಭಾರತ್ ಮಿಷನ್ 2017-18ರ ಸಾಲಿನಲ್ಲಿ ಸ್ವಚ್ಚ ಬಂದರು ಪ್ರಶಸ್ತಿ ಪಡೆದಿದೆ.