LATEST NEWS
ನವಮಂಗಳೂರು ಬಂದರು ದಾಖಲೆಯ ಸರಕು ನಿರ್ವಹಣೆ
ನವಮಂಗಳೂರು ಬಂದರು ದಾಖಲೆಯ ಸರಕು ನಿರ್ವಹಣೆ
ಮಂಗಳೂರು ಎಪ್ರಿಲ್ 3: ನವಮಂಗಳೂರು ಬಂದರು 2017-18ರ ಸಾಲಿನಲ್ಲಿ ದಾಖಲೆ ಪ್ರಮಾಣದ ಅತ್ಯಧಿಕ ಸರಕು ನಿರ್ವಹಣೆ ಮಾಡಿದೆ.
ಪ್ರಸಕ್ತ 2017-18ರ ಸಾಲಿನಲ್ಲಿ ನವಮಂಗಳೂರು ಬಂದರು ಅತ್ಯಧಿಕ ಅಂದರೆ 42.05 ಮಿಲಿಯನ್ ಟನ್ ಸರಕು ನಿರ್ವಹಣೆ ಮಾಡಿದೆ. ಇದು ಕಳೆದ ವರ್ಷದ ದಾಖಲೆಯಾದ 39.94 ಮಿಲಿಯನ್ ಟನ್ ನಿರ್ಹಣೆಯನ್ನು ಮೀರಿಸಿದ್ದು, ಈ ಬಾರಿ ಶೇಕಡ 5.28 ರಷ್ಟು ಏರಿಕೆ ಕಂಡಿದೆ.
ಕೇಂದ್ರ ಬಂದರು ಇಲಾಖೆ ನಿಗದಿ ಪಡಿಸಿದ್ದ 41 ಮಿಲಿಯನ್ ಟನ್ ಗಳ ಗುರಿಯನ್ನು ನವಮಂಗಳೂರು ಬಂದರು ಸಾಧಿಸಿದ್ದು, ಗುರಿಗಿಂತ ಶೇಕಡ 2.57 ರಷ್ಚು ಸಾಧನೆಯನ್ನು ನವಮಂಗಳೂರು ಬಂದರು ಮಾಡಿದೆ.
ಈ ಸಲದ ಸರಕು ನಿರ್ವಹಣೆಯಲ್ಲಿ ಅತ್ಯಧಿಕವಾದಿ ಕಾಫಿಯನ್ನು ರಫ್ತು ಮಾಡಲಾಗಿದ್ದು ಸುಮಾರಿ 2.41 ಲಕ್ಷ ಟನ್ ಗಳಷ್ಟು ಕಾಫಿಯನ್ನು ರಫ್ತು ಮಾಡಲಾಗಿದೆ. ಅಲ್ಲದೆ ಕಬ್ಬಿಣದ ಅದಿರು, ಪಿಒಎಲ್ ಉತ್ಪನ್ನಗಳು, ಅಡುಗೆ ಎಣ್ಣೆ ಮತ್ತು ಇತರ ಸರಕುಗಳ ನಿರ್ವಹಣೆ ಹೆಚ್ಚಳವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.