LATEST NEWS
ಬಿ.ಆರ್.ಶೆಟ್ಟಿಗೆ ಬಿಗ್ ಶಾಕ್…. 968 ಕೋಟಿ ಪಾವತಿಸಲು ಲಂಡನ್ ಕೋರ್ಟ್ ಆದೇಶ

ಲಂಡನ್ : ಅನಿವಾಸಿ ಉದ್ಯಮಿ ಬಿ. ಆರ್ ಶೆಟ್ಟಿ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದ್ದು, ಇದೀಗ ವಿದೇಶಿ ವಿನಿಮಯ ವ್ಯವಹಾರ ವಹಿವಾಟಿನ ಭಾಗವಾಗಿ ಲಂಡನ್ ಬ್ಯಾಂಕ್ ಬಾರ್ಕ್ಲೇಸ್ ಗೆ 131 ಮಿಲಿಯನ್ (ಭಾರತೀಯ ಕರೆನ್ಸಿಯಲ್ಲಿ ರೂ 9,68,27,99,500) ಪಾವತಿಸಬೇಕೆಂದು ಲಂಡನ್ ಕೋರ್ಟ್ ಆದೇಶ ಹೊರಡಿಸಿದೆ.
2020ರಲ್ಲಿ ಬಾರ್‌ಕ್ಲೇಸ್ ಜತೆ ಹಣಕಾಸು ವ್ಯವಹಾರ ಮಾಡಿಕೊಂಡಿದ್ದ ಬಿ.ಆರ್ ಶೆಟ್ಟಿ ಒಡೆತನದ ವಿದೇಶಿ ಹಣ ವಿನಿಮಯ ಸಂಸ್ಥೆ, ಇದನ್ನು ಮಾರುಪಾವತಿ ಮಾಡಲು ವಿಫಲವಾಗಿತ್ತು. ಹೀಗಾಗಿ ಹಣ ವಸೂಲಿ ಮಾಡಿಕೊಡಬೇಕು ಎಂದು ಬಾರ್‌ಕ್ಲೇಸ್, ದುಬೈ ನ್ಯಾಯಾಲಯದ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ದುಬೈ ಕೋರ್ಟ್ ಇದೀಗ ಬಾರ್‌ಕ್ಲೇಸ್ ಸಂಸ್ಥೆಗೆ 131 ಮಿಲಿಯನ್ ಡಾಲರ್ ಪಾವತಿ ಮಾಡಬೇಕು ಎಂದು ಆದೇಶಿಸಿದೆ. ಲಂಡನ್‌ನಲ್ಲಿ ನಡೆದ ಈ ವಿಚಾರಣೆಯಲ್ಲಿ ಭಾಗಿಯಾಗಿದ್ದ ಬಿ.ಆರ್ ಶೆಟ್ಟಿ ಪರ ವಕೀಲರು, ಈಗಾಗಲೇ ಶೆಟ್ಟಿ ಹಣಕಾಸು ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ದಾಖಲೆಗಳನ್ನು ಸಲ್ಲಿಕೆ ಮಾಡಲು ಪ್ರಕರಣವನ್ನು ಮುಂದೂಡಬೇಕು ಎಂದು ಮನವಿ ಮಾಡಿದರು. ಆದರೆ ಕೋರ್ಟ್ ಬಿ.ಆರ್ ಶೆಟ್ಟಿ ಪರ ವಕೀಲರ ಮನವಿಯನ್ನು ತಳ್ಳಿ ಹಾಕಿತು.

ದುಬೈನಲ್ಲಿ ಎನ್‌ಎಂಸಿ ಹೆಲ್ತ್ ಎನ್ನುವ ವೈದ್ಯಕೀಯ ಸಂಸ್ಥೆ ಸ್ಥಾಪಿಸಿದ್ದ ಬಿ.ಆರ್ ಶೆಟ್ಟಿ, ಅದರಲ್ಲಿ ಭಾರೀ ನಷ್ಟ ಅನುಭವಿಸಿದ್ದರು. ಪರಿಣಾಮ ತಾನು ಸ್ಥಾಪಿಸಿದ ಕಂಪನಿಯಿಂದಲೇ ಹೊರ ದಬ್ಬಲ್ಪಟ್ಟಿದ್ದರು. ಬಳಿಕ ವಿಶ್ವಾದ್ಯಂತ ಇರುವ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಲಂಡನ್ ಕೋರ್ಟ್ ಆದೇಶ ಮಾಡಿತ್ತು.
ಇದೀಗ ಕೂಡಲೇ ಬಿ ಆರ್ ಶೆಟ್ಟಿ ಬ್ಯಾಂಕ್ ಬಾರ್ಕ್ಲೇಸ್‌ಗೆ 131 ಮಿಲಿಯನ್ ರೂ ಪಾವತಿಸಲು ಆದೇಶಿಸಿದೆ. ಜೊತೆಗೆ ಭಾರತ ಸೇರಿದಂತೆ ಇತರ ದೇಶಗಳು, ಲಂಡನ್ ನಲ್ಲಿರುವ ಬಿ.ಆರ್.ಶೆಟ್ಟಿ ಅವರ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್ ಪ್ರತಿನಿಧಿಗಳು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದಾರೆ.