FILM
ಬಿಕಿನಿಯಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ – ವಿಡಿಯೋ ಸಖತ್ ವೈರಲ್
ಬೆಂಗಳೂರು ಜನವರಿ 11: ಚಂದನ್ ಶೆಟ್ಟಿಯ ಜೊತೆ ವೈವಾಹಿಕ ಸಂಬಂಧ ಕಡಿದುಕೊಂಡ ಬೆನ್ನಲ್ಲೇ ನಿವೇದಿತಾ ಗೌಡ ಸಖತ್ ಗ್ಲಾಮರಸ್ ಆಗಿ ಕಾಣಿಸಿತೊಡಗಿದ್ದರು. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಅರು ಇದೇ ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಬಾರ್ಬಿ ಡಾಲ್ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ , ಸದಾ ರೀಲ್ಸ್ ಗಳನ್ನು ಮಾಡಿಕೊಂಡಿರುತ್ತಿದ್ದ ನಿವೇದಿತಾ ಗೌಡ, ಚಂದನ್ ಶೆಟ್ಟಿ ಜೊತೆಗಿನ ಡಿವೋರ್ಸ್ ಬಳಿಕ ನಿವೇದಿತಾ ಮತ್ತಷ್ಟು ಹಾಟ್ ಆಗಿದ್ದಾರೆ . ಇತ್ತೀಚೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಕಂಟೆಂಟ್ ಗಳು ಈಗ ದಿನದಿಂದ ದಿನಕ್ಕೆ ಹಾಟ್ ಅವತಾರಕ್ಕೆ ಸಾಕ್ಷಿಯಾಗುತ್ತಿದೆ.
ಇದೀಗ ಕಳೆದ ಕೆಲವು ಸಮಯದಿಂದ ನಿವೇದಿತಾ ಗೌಡ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಅಲ್ಲಿನ ಪಾರ್ಟಿಗಳಲ್ಲಿ, ಬೀಚ್ ಗಳಲ್ಲಿ, ಹೊಸ ಹೊಸ ಸಾಹಸಗಳನ್ನು ಮಾಡುತ್ತಾ, ಆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆವಾಗವಾಗ ಶೇರ್ ಮಾಡುತ್ತಲೇ ಇರುತ್ತಾರೆ.
ನಿನ್ನೆಯಷ್ಟೇ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಡ್ರೇಸ್ ಮಾಡಿರುವ ವಿಡೀಯೋ ಶೇರ್ ಮಾಡಿದ್ದರು. ಇದೀಗ ಬಿಕಿನಿ ಧರಿಸಿ, ಅದರ ಮೇಲೊಂದು ಪಾರದರ್ಶಕ ಬಟ್ಟೆ ಧರಿಸಿ ರೀಲ್ಸ್ ಒಂದನ್ನು ಶೇರ್ ಮಾಡಿದ್ದಾರೆ. ಕಾಮೆಂಟ್ ಸೆಕ್ಷನ್ ತುಂಬಾ ಸೋನು ಗೌಡ (Sonu Gowda) ಗುಣಗಾನ ಮಾಡಿದ್ದಾರೆ. ನಿವೇದಿತಾ ಗೌಡ, ಸೋನು ಗೌಡರನ್ನೇ ಮೀರಿಸುತ್ತಾರೆ. ಸೋನು ಗೌಡರನ್ನೇ ಫಾಲೋ ಮಾಡ್ತಿದ್ದಾರೆ ಎಂದಿದ್ದಾರೆ. ಇನ್ನೂ ಕೆಲವರು, ಇನ್ನು ಏನೇನು ನೋಡೋದು ಬಾಕಿ ಇದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಿವೇದಿತಾ ಗೌಡರಿಗೆ ಕೆಟ್ಟ ಕಾಮೆಂಟ್ ಬರೋದು ಹೊಸದೇನಲ್ಲ, ಆದರೆ ಅವರು ಕೆಟ್ಟ ಕಾಮೆಂಟ್ ಗಳಿಗೆ ಕ್ಯಾರೆ ಎನ್ನದೇ, ತಮ್ಮನ್ನು ಇಷ್ಟಪಡುವ ಅಭಿಮಾನಿಗಳಿಗಾಗಿ ವಿಡೀಯೋ, ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.