LATEST NEWS
ಮೊಣಕಾಲಿನಲ್ಲಿ ತಿರುಪತಿ ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದ ಕ್ರಿಕೆಟಿಗ ನಿತೀಶ್ ಕುಮಾರ್ ರೆಡ್ಡಿ
ತಿರುಮಲ ಜನವರಿ 14: ಭಾರತದ ಉದಯೋನ್ಮುಖ ಕ್ರಿಕೆಟಿಗ ನಿತೀಶ್ ಕುಮಾರ್ ರೆಡ್ಡಿ ತಿರುಪತಿ ತಿಮ್ಮಪ್ಪನಿಗೆ ಕಠಿಣ ಹರಕೆ ತೀರಿಸಿದ್ದಾರೆ. ಮೊಣಕಾಲಿನಲ್ಲೇ ತಿರುಪತಿ ಮೆಟ್ಟಿಲು ಹತ್ತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿ ಚೊಚ್ಚಲ ಸರಣಿಯಲ್ಲೇ ಶತಕ ಸಿಡಿಸಿದ್ದ ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ಕ್ರಿಕೆಟಿಗೆ ನಿತೀಶ್ ಕುಮಾರ್ ರೆಡ್ಡಿ ಮೊಣಕಾಲುಗಳಲ್ಲೇ ಮೆಟ್ಟಿಲುಗಳನ್ನು ಹತ್ತಿ ತಮ್ಮ ಹರಕೆ ತೀರಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ತಿರುಪತಿಯಿಂದ ತಿರುಮಲಕ್ಕೆ ಅಲಿಪಿರಿ ಮಾರ್ಗವಾಗಿ ಸುಮಾರು 12 ಕಿ.ಮೀ ದೂರವಿದ್ದು, ಈ ಮಾರ್ಗವು 3,550 ಮೆಟ್ಟಿಲುಗಳನ್ನು ಹೊಂದಿದೆ. ವಿಶೇಷವಾಗಿ ಕಡಿದಾಗಿದ್ದು, ಸಂಪೂರ್ಣ ಆರೋಗ್ಯವಂತ ಈ ಮಾರ್ಗವಾಗಿ ಸುಮಾರು 1 ರಿಂದ 1.5 ಗಂಟೆಗಳಲ್ಲಿ ತಿರುಮಲ ತಲುಪಬಹುದು.
ಇಂತಹ ಕಡಿದಾದ ಮಾರ್ಗವನ್ನು ಕಾಲಿನಲ್ಲಿ ಹತ್ತಿ ಸಾಗುವುದೇ ಸವಾಲು ಎಂದುಕೊಂಡರೆ ನಿತೀಶ್ ಕುಮಾರ್ ರೆಡ್ಡಿ ಮೊಣಕಾಲಿನಲ್ಲಿ ಹತ್ತಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಕಲ್ಪಿಸಿದ್ದಕ್ಕೆ ತಿಮ್ಮಪ್ಪನಿಗೆ ಹರಕೆ ತೀರಿಸಿದ್ದಾರೆ ಎನ್ನಲಾಗಿದೆ.