DAKSHINA KANNADA
ಕಳೆದ 40 ಗಂಟೆಗಳ ಕಾಲ ಸಮುದ್ರದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ 9 ಜನರನ್ನು ರಕ್ಷಿಸಲಾಗಿದೆ ಇದು ಆಪರೆಶನ್ ಟಗ್..
ಮಂಗಳೂರು, ಮೇ 17: ಮೇ ೧೫ ರಂದು ತೌಖ್ತೆ ಭೀಕರ ಅಲೆಗಳಿಗೆ ಸಿಕ್ಕಿದ ಎಂ ಆರ್ ಪಿ ಎಲ್ ಗೆ ಸೇರಿದ ಟಗ್ ಕಾಪು ದೀಪಸ್ತಂಬದ ಬಳಿಯ ಕಲ್ಲಿಗೆ ಢಿಕ್ಕಿ ಹೊಡೆಯಿತು. ಗಜ ಗಾತ್ರದ ಅಲೆಗಳ ಮಧ್ಯೆ ಸಿಲುಕಿದ ಗುತ್ತಿಗೆ ಕಾರ್ಮಿಕರು ಬದುಕುವ ಆಸೆಯನ್ನೇ ಬಿಟ್ಟಿದ್ದರು . ಈ ಸಂದರ್ಭ ಅವರಿಗೆ ಆಸರೆಯಾಗಿದ್ದು ಒಂದು ವಿಡಿಯೋ ಕಾಲ್.
ಅದರಲ್ಲಿದ್ದ ಒಬ್ಬರು ಸೆಲ್ಫಿ ವಿಡಿಯೋ ಮಾಡಿ ರಕ್ಷಣೆ ಮಾಡುವಂತೆ ಅಂಗಲಾಚಿದ್ರು. ಈ ವಿಚಾರ ಎಲ್ಲೆಡೆ ವೈರಲ್ ಆಗಿ ಎನ್ ಎಂ ಪಿಟಿಯ ಟಗ್ ನಲ್ಲಿದ್ದ ಒಂಭತ್ತು ಮಂದಿಯ ಜೀವ ಉಳಿಸಲು ಕಾರ್ಯಾಚರಣೆ ಆರಂಭವಾಯ್ತು. ಕೋಸ್ಟ್ ಗಾರ್ಡ್ ಪರಿಶೀಲನೆ ನಡೆಸಿ ಹೆಲಿಕಾಪ್ಟರ್ ಬೇಕೆಂದು ನಿರ್ಧರಿಸಿದ್ರು.
ಆದ್ರೆ ಹೆಲಿಕಾಪ್ಟರ್ ಮುಂಬೈ ಯಿಂದ ಬರಬೇಕು ಅದಕ್ಕೆ ಒಂದಷ್ಟು ಅನುಮತಿ ದೊರೆಯಬೇಕು. ಎಲ್ಲಾ ಒಕೆಆಯ್ತು ಆದ್ರೆ ಆಗಲೇ ಆ ಒಂಭತ್ತು ಜನ ೩೨ ಗಂಟೆ ಸಮುದ್ರದಲ್ಲಿ ಕಳೆದಾಗಿತ್ತು. ಕತ್ತಲು ಆವರಿಸಿತ್ತು. ಕಾರ್ಯಾಚರಣೆಗೆ ತೊಡಕಾಗಿತ್ತು. ಅದೃಷ್ಟ ವಶಾತ್ ಮಳೆಆರ್ಭಟ ಕಡಿಮೆಯಾಗಿ ತೌಖ್ತೆ ಗುಜರಾತ್ ನತ್ತ ಮುಖಮಾಡಿತ್ತು. ಆದರೆ ಟಗ್ ನಲ್ಲಿದ್ದವರು. ಪ್ರಾಣಾಪಾಯದಲ್ಲಿದ್ದರು.
ಸತತ ಕಾರ್ಯಾಚರಣೆ ನಡೆಸಿ ಹೆಲಿಕಾಪ್ಟರ್ ಬಳಸಿ ಎಲ್ಲಾ ಒಂಭತ್ತು ಜನರನ್ನು ರಕ್ಷಿಸಲಾಯಿತು. ಇನ್ನೊಂದು ಟಗ್ ಬೋಟ್ ಮಂಗಳೂರಿನಿಂದ ಕಣ್ಮರೆಯಾಗಿ ಪಡುಬಿದ್ರಿ ಕಡಲ ತೀರದಲ್ಲಿ ಪತ್ತೆಯಾಗಿತ್ತು. ಇದರಲ್ಲೂ ಒಂಭತ್ತು ಜನ ಇದ್ರು ಮೂವರು ಸತತ ೧೦ ಗಂಟೆ ಈಜಿ ಮಲ್ಪೆ ಮತ್ತು ಉದ್ಯಾವರ ತೀರ ಸೇರಿದ್ರು. ಒಬ್ಬನ ಶವ ಪತ್ತೆಯಾಗಿದೆ. ಇನ್ನು ಐವರು ನಾಪತ್ತೆಯಾಗಿದ್ದಾರೆ. ಎನ್ ಎಂ ಪಿ ಟಿಯ ಒಳಭಾಗದಲ್ಲಿ ಟಗ್ ಗೆ ಲಂಗರು ಹಾಕಲು ನಿರಾಕರಿಸಿರುವುದನ್ನು ತನಿಖೆ ನಡೆಸಲು ದಕ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಒಟ್ಟಾರೆ ತೌಖ್ತೆ ಚಂಡಮಾರುತ ಜನಜೀವನಕ್ಕೆ ದೊಡ್ಡ ಹೊಡೆತ ನೀಡಿದೆ. ಅಪಾರ ಹಾನಿ ಉಂಟುಮಾಡಿದೆ.
Video: