DAKSHINA KANNADA
ನಿಡ್ಪಳ್ಳಿ ಗ್ರಾಮಪಂಚಾಯತ್ ಉಪಚುನಾವಣೆ: ಕಾಂಗ್ರೇಸ್ ಅಭ್ಯರ್ಥಿ ಸತೀಶ್ ಶೆಟ್ಟಿ ಗೆಲುವು

ಪುತ್ತೂರು, ಜುಲೈ 26: ನಿಡ್ಪಳ್ಳಿ ಗ್ರಾಮಪಂಚಾಯತ್ ನ ಉಪಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ ಗೆಲುವು ಕಂಡಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ 235 ಮತಗಳನ್ನು ಪಡೆದು ಪುತ್ತಿಲ ಪರಿವಾರದ ಜಗನ್ನಾಥ ರೈ ವಿರುದ್ಧ 27 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ನಿಡ್ಪಳ್ಳಿ ಪಂಚಾಯತ್ ನಲ್ಲೂ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಆರ್ಯಾಪು ಗ್ರಾಮಪಂಚಾಯತ್ ಮತ್ತು ನಿಡ್ಪಳ್ಳಿ ಗ್ರಾಮಪಂಚಾಯತ್ ನ ತಲಾ ಒಂದು ಸ್ಥಾನಕ್ಕೆ ನಡೆದಿದ್ದ ಉಪಚುನಾವಣೆಯಲ್ಲಿ ಆರ್ಯಾಪು ಗ್ರಾಮಪಂಚಾಯತ್ ನಲ್ಲಿ ಪುತ್ತಿಲ ಪರಿವಾರ ಸುಬ್ರಹ್ಮಣ್ಯ ಬಲ್ಯಾಯ ಗೆಲುವು ಸಾಧಿಸಿದರೆ, ನಿಡ್ಪಳ್ಳಿ ಗ್ರಾಮಪಂಚಾಯತ್ ನಲ್ಲಿಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ ಗೆಲುವು ಕಂಡಿದ್ದಾರೆ.