LATEST NEWS
ಸಿರಿಯಾ ಮೂಲದ ಐಸಿಸ್ ಉಗ್ರರ ಜೊತೆ ನಂಟು ಆರೋಪ..ಮಾಜಿ ಶಾಸಕನ ಮಗನ ಮನೆ ಮೇಲೆ ಎನ್ಐಎ ದಾಳಿ…

ಮಂಗಳೂರು ಅಗಸ್ಟ್ 04: ಉಳ್ಳಾಲದ ಮಾಜಿ ಶಾಸಕ ಬಿ. ಎಂ ಇದಿನಬ್ಬ ಅವರ ಮಗನ ಮನೆ ಮೇಲೆ ಎನ್ ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸಿರಿಯಾ ಮೂಲದ ಉಗ್ರ ಸಂಘಟನೆಯೊಂದಿಗೆ ನಂಟು ಇರುವ ಶಂಕೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಇಂದು ಮುಂಜಾನೆ ನಾಲ್ಕು ಕಾರುಗಳಲ್ಲಿ ಎನ್ಐಎಯ 25 ಮಂದಿಯಿದ್ದ ತಂಡ ಉಳ್ಳಾಲದ ಮಾಸ್ತಿಕಟ್ಟೆಗೆ ಆಗಮಿಸಿ ಈ ದಾಳಿ ನಡೆಸಿದೆ. ಎನ್ಐಎ ಜೊತೆಗೆ ಮಂಗಳೂರಿನ ಸ್ಥಳೀಯ ಪೊಲೀಸರು ಕೂಡ ಭದ್ರತೆ ಒದಗಿಸಿದ್ದಾರೆ.

ಇದಿನಬ್ಬ ಪುತ್ರ ಬಿ.ಎಂ. ಬಾಷಾ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಇವರ ಪುತ್ರರು ವಿದೇಶದಲ್ಲಿದ್ದಾರೆ. ಇವರ ಕುಟುಂಬದವರು ಐಸಿಸ್ ಸಂಬಂಧಿಸಿದ ಯೂಟ್ಯೂಬ್ ಚಾನೆಲ್ ಗಳನ್ನು ಸಬ್ ಸ್ಕ್ರೈಬ್ ಮಾಡಿ, ಮೃದು ಧೋರಣೆ ಅನುಸರಿಸಿದ್ದರು ಎನ್ನಲಾಗಿದೆ. ಅಲ್ಲದೆ, ಐಸಿಸ್ ಸಂಪರ್ಕ ಮತ್ತು ಜಮ್ಮು ಕಾಶ್ಮೀರದ ಉಗ್ರ ಸಂಘಟನೆಯ ಯುವಕರ ಜೊತೆ ಮೊಬೈಲ್ ಸಂಪರ್ಕ ಇರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಉಳ್ಳಾಲದಲ್ಲಿ ಮಾಜಿ ಶಾಸಕ, ಸಾಹಿತಿ ದಿ.ಇದಿನಬ್ಬ ಪುತ್ರನ ಮನೆಗೆ ಎನ್ ಐಎ ದಾಳಿ ವಿಚಾರ ದಿ.ಇದಿನಬ್ಬ ಅವರ ಮರಿ ಮೊಮ್ಮಗಳು ಐಸಿಸ್ ಸೇರಿರುವ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದ್ದು, ಮೂರು ವರ್ಷಗಳ ಹಿಂದೆ ನಿಗೂಢವಾಗಿ ಇದಿನಬ್ಬ ಮರಿ ಮೊಮ್ಮಗಳ ಕುಟುಂಬ ನಾಪತ್ತೆಯಾಗಿತ್ತು. ಸದ್ಯ ಎನ್ ಐಎ ದಾಳಿ ನಡೆಸಿರುವ ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾರ ಪುತ್ರಿಯ ಮಗಳು ಅಜ್ಮಲ್ ಕುಟುಂಬ 2 ವರ್ಷಗಳ ಹಿಂದೆ ಕಾಸರಗೋಡಿನ 17 ಮಂದಿ ಸಿರಿಯಾದ ಐಸಿಸ್ ಉಗ್ರ ಸಂಘಟನೆ ಸೇರಿದ್ದರು, ಈ 17 ಜನರ ಪೈಕಿ ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾರ ಮೊಮ್ಮಗಳು ಅಜ್ಮಲ್ ಕುಟುಂಬವೂ ಇತ್ತು, ಅಜ್ಮಲ್ ಳನ್ನ ಕೇರಳ ಮೂಲದ ಎಂಬಿಎ ಪದವೀಧರ ಸಿಯಾಝ್ ಅನ್ನೋನ ಜೊತೆ ವಿವಾಹ ಮಾಡಿ ಕೊಡಲಾಗಿತ್ತು.
ವರ್ಷಗಳ ಹಿಂದೆ ಗಂಡ ಸಿಯಾಝ್ ಉನ್ನತ ಶಿಕ್ಷಣಕ್ಕಾಗಿ ಶ್ರೀಲಂಕಾಕ್ಕೆ ಹೋಗ್ತಿರೋದಾಗಿ ಹೇಳಿ ಹೋದವರು ಇಂದಿನವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಶ್ರೀಲಂಕಾದಿಂದ ಮಸ್ಕತ್ ಹಾಗೂ ಕತಾರ್ ಗೆ ತೆರಳಿ ಅಲ್ಲಿಂದ ಸಿರಿಯಾಕ್ಕೆ ಹೋಗಿ ಐಸಿಸ್ ಸೇರಿದ್ದಾರೆಂದು ಮಾಹಿತಿ ಇತ್ತು, ವೈದ್ಯರಾಗಿರುವ ಸಿಯಾಝ್‍ನ ಸಹೋದರ ಕೂಡ ಹೆಂಡತಿ ಮತ್ತು ಮಗುವಿನೊಂದಿಗೆ ತೆರಳಿದ್ದ ಈ ಬಗ್ಗೆ ಕೇರಳ ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿತ್ತು. ಅದೇ ತನಿಖೆಯ ಭಾಗವಾಗಿ ಅಜ್ಮಲ್ ಅಜ್ಜ ಇಸ್ಮಾಯಿಲ್ ಭಾಷಾ ಮನೆಗೆ ದಾಳಿ ಶಂಕೆ ಇದೆ. ಸಾಹಿತಿಯೂ ಆಗಿದ್ದ ದಿ.ಇದಿನಬ್ಬ ಮೂರು ಬಾರಿ ಕಾಂಗ್ರೆಸ್ ನಿಂದ ಉಳ್ಳಾಲ ಶಾಸಕರಾಗಿ ಆಯ್ಕೆಯಾಗಿದ್ದರು.