Connect with us

    LATEST NEWS

    ಹಾಲಾಡಿಗೆ ಮತ್ತೆ ತಪ್ಪಿದ ಸಚಿವ ಸ್ಥಾನ…ಕಾರ್ಕಳ ಶಾಸಕ ಸುನಿಲ್ ಕುಮಾರ್ ಗೆ ಒಲಿದ ಸಚಿವ ಸ್ಥಾನ…!!

    ಮಂಗಳೂರು ಅಗಸ್ಟ್ 04: ಬಿಜೆಪಿ ಸರಕಾರದಲ್ಲಿ ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಸಚಿವ ಸ್ಥಾನ ಮತ್ತೆ ತಪ್ಪಿದ್ದು, ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿ ಕರಾವಳಿಯ ಮೂವರಿಗೆ ಸಚಿವ ಸ್ಥಾನ ದೊರೆತಿದೆ.


    ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ‘ಒಟ್ಟು 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬುಧವಾರ ಬೆಳಿಗ್ಗೆ ಮಾತನಾಡಿದ ಅವರು ಈ ಬಾರಿ ಉಪ ಮುಖ್ಯಮಂತ್ರಿ ಸ್ಥಾನ ಇಲ್ಲ. ಅನುಭವ ಮತ್ತು ಹೊಸ ಶಕ್ತಿಯ ಸಮ್ಮಿಶ್ರದ ಸಚಿವ ಸಂಪುಟ ರಚಿಸಲಾಗಿದೆ ಎಂದಿದ್ದರು.


    ಈ ಬಾರಿಯ ಸಂಪುಟದಲ್ಲಿ ಕರಾವಳಿಯ ಸುಳ್ಯ ಶಾಸಕ ಅಂಗಾರ, ಎಂಎಲ್ ಸಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿದೆ. ಆದರೆ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕುಂದಾಪುರದ ಶಾಸಕ ಹಾಲಾಡಿಯವರನ್ನು ಈ ಬಾರಿಯೂ ಕಡೆಗಣಿಸಲಾಗಿದ್ದು, ಇದು ಹಾಲಾಡಿಯವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿಜೆಪಿಯ 29 ಶಾಸಕರ ಅಧಿಕೃತ ಪಟ್ಟಿ ಇಲ್ಲಿದೆ.

    1. ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

    2. ಆರ್.ಅಶೋಕ್- ಪದ್ಮನಾಭ ನಗರ

    3. ಬಿ.ಸಿ ಪಾಟೀಲ – ಹಿರೇಕೇರೂರು

    4. ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

    5. ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

    6. ಉಮೇಶ್ ಕತ್ತಿ- ಹುಕ್ಕೇರಿ

    7. ಎಸ್.ಟಿ.ಸೋಮಶೇಖರ್- ಯಶವಂತಪುರ

    8. ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ

    9. ಬೈರತಿ‌ ಬಸವರಾಜ – ಕೆ ಆರ್ ಪುರಂ

    10. ಮುರುಗೇಶ್ ನಿರಾಣಿ – ಬಿಳಿಗಿ

    11. ಶಿವರಾಂ ಹೆಬ್ಬಾರ್- ಯಲ್ಲಾಪುರ

    12. ಶಶಿಕಲಾ ಜೊಲ್ಲೆ- ನಿಪ್ಪಾಣಿ

    13. ಕೆ.ಸಿ.ನಾರಾಯಣ ಗೌಡ – ಕೆ‌.ಆರ್ ಪೇಟೆ

    14. ಸುನೀಲ್ ಕುಮಾರ್ – ಕಾರ್ಕಳ

    15. ಆರಗ ಜ್ಞಾನೇಂದ್ರ – ತೀರ್ಥ ಹಳ್ಳಿ

    16. ಗೋವಿಂದ ಕಾರಜೋಳ-ಮುಧೋಳ

    17. ಮುನಿರತ್ನ- ಆರ್.ಆರ್ ನಗರ

    18. ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ

    19. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

    20. ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

    21. ಹಾಲಪ್ಪ ಆಚಾರ್ – ಯಲ್ಬುರ್ಗ

    22 . ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ

    23. ಕೋಟಾ ಶ್ರೀನಿವಾಸ ಪೂಜಾರಿ – ಎಂ.ಎಲ್.ಸಿ

    24. ಪ್ರಭು ಚೌವ್ಹಾಣ್ – ಔರಾದ್

    25. ವಿ.ಸೋಮಣ್ಣ – ಗೋವಿಂದ್ ರಾಜನಗರ

    26. ಎಸ್ ಅಂಗಾರ- ಸುಳ್ಯ

    27. ಆನಂದ್ ಸಿಂಗ್ – ಹೊಸಪೇಟೆ

    28. ಸಿ.ಸಿ‌ ಪಾಟೀಲ – ನರಗುಂದ

    29. ಬಿಸಿ ನಾಗೇಶ್ – ತಿಪಟೂರು

    Share Information
    Advertisement
    Click to comment

    You must be logged in to post a comment Login

    Leave a Reply