DAKSHINA KANNADA
ಸುಳ್ಯದ ಪಿಎಫ್ಐ ಕಚೇರಿ ಎನ್ಐಎ ವಶಕ್ಕೆ….!!
ಸುಳ್ಯ ಮಾರ್ಚ್ 27: ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದ ಸುಳ್ಯದ PFI ಕಚೇರಿಯನ್ನು ಎನ್ ಐಎ ಸಂಪೂರ್ಣ ವಶಕ್ಕೆ ಪಡೆದಿದೆ.
ಸುಳ್ಯ ಗಾಂಧಿನಗರ – ಆಲೆಟ್ಟಿ ರಸ್ತೆಯ ತಾಹಿರಾ ಕಾಂಪ್ಲೆಕ್ಸ್ ನಲ್ಲಿದ್ದ ಮೊದಲ ಮಹಡಿಯಲ್ಲಿದ್ದ ಪಿಎಫ್ಐ ಕಚೇರಿಯನ್ನು ಸಂಪೂರ್ಣ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ತಂಡದ ಎಸ್ಪಿ ಶಣ್ಮುಗಂ ಈ ಬಗ್ಗೆ ಮಾರ್ಚ್ 25ರಂದು ಆದೇಶ ಮಾಡಿದ್ದಾರೆ. ಸದ್ರಿ ಕಟ್ಟಡವನ್ನು ಯಾರಿಗೂ ಬಾಡಿಗೆ ಅಥವಾ ಲೀಸ್ ಕೊಡುವಂತಿಲ್ಲ. ಅಥವಾ ಇನ್ಯಾವುದೇ ಕೆಲಸಕ್ಕೆ ಬಳಸಿಕೊಳ್ಳುವಂತಿಲ್ಲ. ಅಲ್ಲಿರುವ ವಸ್ತುಗಳನ್ನಾಗಲೀ, ಇನ್ನಾವುದೇ ಸಾಮಗ್ರಿಗಳನ್ನು ಬೇರೆ ಕಡೆಗೆ ಸಾಗಿಸುವುದು, ನವೀಕರಣಗೊಳಿಸುವುದು ನಿಷಿದ್ಧ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆಯ ಮೂಲಕ ಸಮಾಜದಲ್ಲಿ ಭಯ ಮೂಡಿಸುವ ಉದ್ದೇಶ ಇದ್ದಿರುವುದು ತನಿಖೆಯಲ್ಲಿ ಕಂಡುಬಂದಿದ್ದು, ಹೀಗಾಗಿ ಇದೊಂದು ಭಯೋತ್ಪಾದಕ ಕೃತ್ಯ. ಈ ರೀತಿಯ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಲು ಪಿಎಫ್ಐ ಕಚೇರಿಯನ್ನು ಬಳಸಿಕೊಂಡಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.