WORLD
ಕೊರೊನಾ ಮುಕ್ತ ಮೊದಲ ರಾಷ್ಟ್ರವಾಯಿತು ನ್ಯೂಝಿಲ್ಯಾಂಡ್…
ವೆಲ್ಲಿಂಗ್ಟನ್, ಜುಲೈ 14: ವಿಶ್ವದ ಬಹುತೇಕ ರಾಷ್ಟ್ರಗಳು ಕೊರೊನಾ ಮಹಾಮಾರಿಯಿಂದ ತತ್ತರಿಸುತ್ತಿದ್ದರೆ, ದೀಪ ರಾಷ್ಟ್ರ ನ್ಯೂಜಿಲ್ಯಾಂಡ್ ಇದೀಗ ಕೊರೊನಾ ದಿಂದ ಸಂಪೂರ್ಣ ಮುಕ್ತ ರಾಷ್ಟವಾಗಿ ಹೊರಹೊಮ್ಮಿದೆ. ಕಳೆದ ಎರಡು ವಾರಗಳಿಂದ ನ್ಯೂಝಿಲ್ಯಾಂಡ್ ನಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗದ ಹಿನ್ನಲೆಯಲ್ಲಿ ಅಲ್ಲಿನ ಸರಕಾರ ಈ ಘೋಷಣೆಯನ್ನು ಮಾಡಿಕೊಂಡಿದೆ.
ಈ ಸಂಬಂಧ ದೇಶದಲ್ಲಿ ಜಾರಿಯಲ್ಲಿದ್ದ ಎಲ್ಲಾ ಕೊರೊನಾ ಲಾಕ್ ಡೌನ್ ನಿಯಮಗಳನ್ನು ಹಿಂಪಡೆಯಲಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ನಿಯಮಗಳನ್ನು ಹಿಂಪಡೆಯಲಾಗಿದೆ. ಆದರೆ ನ್ಯೂಝಿಲ್ಯಾಂಡ್ ಸಂಪರ್ಕಿಸುವ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗಿದ್ದು, ಇತರ ದೇಶಗಳಿಂದ ನ್ಯೂಝಿಲ್ಯಾಂಡ್ ಗೆ ಆಗಮಿಸುವ ದೇಶದ ಜನ 14 ದಿನಗಳ ಕಡ್ಡಾಯ ಕ್ವಾರೈಂಟೈನ್ ಮಾಡಬೇಕು ಎನ್ನುವ ಆದೇಶವನ್ನೂ ಪ್ರಧಾನಿ ಜೆಸಿಂಡಾ ಅರ್ಡೆನ್ ಮಾಡಿದ್ದಾರೆ. ಮಾರ್ಚ್ 25 ರಿಂದ ದೇಶದಾದ್ಯಂದ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೆ ತರಲಾಗಿತ್ತು.
ವ್ಯವಹಾರ, ಶಾಲಾ-ಕಾಲೇಜು ಸೇರಿದಂತೆ ಎಲ್ಲವೂ ಮುಚ್ಚಿತ್ತು. ಒಟ್ಟು 1154 ಪಾಸಿಟೀವ್ ಪ್ರಕರಣ ಸೇರಿದಂತೆ 22 ಮಂದಿ ಕೊರೊನಾ ಕ್ಕೆ ಬಲಿಯಾಗಿದ್ದರು. ಲಾಕ್ ಡೌನ್ ನಿಯಮಾವಳಿಗಳನ್ನು ಅತ್ಯಂತ ಕಟ್ಟು ನಿಟ್ಟಾಗಿ ಜಾರಿಗೆ ತಂದ ಹಿನ್ನಲೆಯಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿತ್ತು. ಇದೀಗ ನ್ಯೂಝಿಲ್ಯಾಂಡ್ ನಲ್ಲಿ ಕೊರೊನಾ ಲಾಕ್ ಡೌನ್ ನಿಯಮವನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದ್ದು, ಎಲ್ಲಾ ವ್ಯವಹಾರಗಳು, ಶಾಲಾ-ಕಾಲೇಜುಗಳು, ಸಿನಿಮಾ-ಮಂದಿರಗಳು ಎಂದಿನಂತೆ ಕಾರ್ಯಾಚರಿಸಲಿದೆ.