Connect with us

    LATEST NEWS

    14 ವರ್ಷದ ಬಾಲಕನ ಅತ್ಯಾಚಾರ ಮಾಡಿದ ಯುವತಿ ಈಗ ಗರ್ಭಿಣಿ

    ನ್ಯೂಯಾರ್ಕ್​: ಹದಿನಾಲ್ಕು ವರ್ಷದ ಬಾಲಕನ ಮೇಲೆ ಅತ್ಯಾಚಾರ ನಡೆಸುವ ಸಂದರ್ಭ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದ ಮಹಿಳೆ ಈಗ ಗರ್ಭಿಣಿಯಾಗಿರುವ ವಿಚಾರ ಬಾರಿ ಸುದ್ದಿಯಾಗಿದೆ.


    ಬ್ರಿಟ್ನಿ ಗ್ರೇ ಎಂಬ 23 ವರ್ಷದ ಯುವತಿ 14 ವರ್ಷ ಬಾಲಕನನ್ನು 2020ರ ಸೆಪ್ಟೆಂಬರ್​ನಲ್ಲಿ 14 ವರ್ಷದ ಬಾಲಕನನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಳು. ಈ ಕೃತ್ಯ ಎಸಗುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದ ಯುವಳನ್ನು ಪೊಲೀಸರು ಬಂಧಿಸಿದ್ದರು, ನಂತರ ಈಕೆಯ ಮೇಲೆ ಪ್ರಥಮ ದರ್ಜೆಯ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿತ್ತು.

    ಈಗ ಈ ವಿಚಾರ ಮತ್ತೆ ಸುದ್ದಿಗೆ ಬಂದಿದ್ದು, ಗ್ರೇ ಬಾಲಕನಿಂದಲೇ ಗರ್ಭಿಣಿಯಾಗಿದ್ದಾಳೆ ಎಂಬ ವಿಚಾರ ತಿಳಿದು ಬಂದಿದ್ದು. ಬಾಲಕನ ವೀರ್ಯದಿಂದಲೇ ಆಕೆ ಗರ್ಭವತಿ ಆಗಿದ್ದಾಳೆ ಎಂಬುದು ಸಂತ್ರಸ್ತ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ದೃಢಪಟ್ಟಿದೆ.
    ಅಲ್ಲದೆ, ಇತ್ತೀಚೆಗೆ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತ ಬಾಲಕ ಮತ್ತು ಆರೋಪಿ ಗ್ರೇ ಒಟ್ಟಿಗೆ ಆಸ್ಪತ್ರೆಗೆ ಪ್ರವೇಶಿಸುತ್ತಿರುವ ವಿಡಿಯೋ ತುಣುಕು ಸಹ ಕೋರ್ಟ್​ಗೆ ಲಭ್ಯವಾಗಿದೆ.

    ಇಬ್ಬರ ನಡುವೆ ಸುಮಾರು ಒಂದು ವರ್ಷದಿಂದ ಇಬ್ಬರ ನಡುವೆ ದೈಹಿಕ ಸಂಬಂಧವಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದು. ಪ್ರಕರಣ ನಡೆದ ಒಂದು ವರ್ಷದ ಬಳಿಕ ಆಕೆ ಗರ್ಭಿಣಿಯಾದ ಬೆನ್ನಲ್ಲೇ ಈ ವಿಚಾರ ಭಾರಿ ಸುದ್ದಿಯಾಗಿದೆ. ಗ್ರೇ ಗರ್ಭಿಣಿಯಾಗಿರುವುದು ಪೊಲೀಸರು ನೀಡಿರುವ ವರದಿಯಲ್ಲೂ ಸಹ ಖಚಿತವಾಗಿದೆ.

    ಕಳೆದ ಮಾರ್ಚ್​ 1ರಂದು ಆಕೆಯನ್ನು ಪ್ರಕರಣದಡಿಯಲ್ಲಿ ಬಂಧಿಸಲಾಗಿದ್ದು, ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮತ್ತೆ ಆಕೆ ಏಪ್ರಿಲ್​ 23ಕ್ಕೆ ಕೋರ್ಟ್​ ಮುಂದೆ ಹಾಜರಾಗಬೇಕಿದ್ದು, ಸದ್ಯ ವಿಚಾರಣೆ ಮುಂದುವರಿದಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *