KARNATAKA
ಮನ್ ಕೀ ಬಾತ್ ನಲ್ಲಿ ಉಡುಪಿಯ ನವದಂಪತಿ ಹೆಸರು ಉಲ್ಲೇಖಿಸಿದ ಮೋದಿ..

ಉಡುಪಿ, ಡಿಸೆಂಬರ್ 27: ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹನಿಮೂನ್ ಗೆ ಹೋಗುವ ಬದಲು ಬೀಚ್ ಸ್ವಚ್ಛ ಮಾಡಿದ ನವದಂಪತಿ ಅನುದೀಪ್ ಹೆಗ್ಡೆ-ಮಿನುಷ ರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಯುವ ದಂಪತಿ ಮಾಡಿರುವ ಈ ಕಾರ್ಯ ದೇಶಕ್ಕೆ ಮಾದರಿ ಎಂದು ಹೊಗಳಿದ್ದಾರೆ.
ಅನುದೀಪ್ ದಂಪತಿ ಹನಿಮೂನ್ ಗೆ ಹೋಗುವ ಬದಲು ಬೈಂದೂರು ತಾಲೂಕಿನ ಸೋಮೇಶ್ವರ ಬೀಚ್ ಸ್ವಚ್ಛ ಮಾಡುವ ಮೂಲಕ ಸುದ್ದಿಯಾಗಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಡುಪಿಯಲ್ಲಿರುವ ದಂಪತಿಗಳ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ
ಈ ವರ್ಷದ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿಯವರು ದಂಪತಿಗಳ ಹೆಸರನ್ನು ಹೇಳಿರುವುದು ದಂಪತಿಗಳಿಗೆ ಎಲ್ಲಿಲ್ಲದ ಖುಷಿಯನ್ನು ನೀಡಿದೆ.
Video Link: