Connect with us

    LATEST NEWS

    ಪ್ರಧಾನಿ ನರೇಂದ್ರ‌ ಮೋದಿಯವರ ಕೇಶರಾಶಿಯ ರಹಸ್ಯ ಬಯಲು ಮಾಡಿದ ಪೇಜಾವರ ಶ್ರೀ…!

    ಬಾಗಲಕೋಟೆ, ಡಿಸೆಂಬರ್ 27 :  ಕೆಲದಿನಗಳಿಂದ ಎಲ್ಲೆಡೆ ಪ್ರಧಾನಿ ನರೇಂದ್ರ‌ ಮೋದಿಯವರ ಕೇಶರಾಶಿಯ ಬಗ್ಗೆಯೇ ಚರ್ಚೆ‌‌. ಈಗ ಪೇಜಾವರ ಶ್ರೀಗಳು ಈ ಕೇಶ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ‌.
    ಯಾವಾಗಲೂ ನೀಟಾಗಿ ಸಿದ್ಧವಾಗುವ ಪ್ರಧಾನಿ ಮೋದಿ ಕೆಲದಿನಗಳಿಂದ ತಮ್ಮ ಔಟ್ ಲುಕ್ ಬದಲಾಯಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು‌. ಇದೀಗ ಇದರ ಹಿಂದಿನ ರಹಸ್ಯ ಬದಲಾಗಿದ್ದು ಮೋದಿ ರಾಮಮಂದಿರ ನಿರ್ಮಾಣ ಮುಗಿಯುವ ತನಕ ತಮ್ಮ ಕೇಶ ವಿನ್ಯಾಸ ಬದಲಿಸದಿರುವ ಹಾಗೂ ಗಡ್ಡ ತೆಗೆಯುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ.
    ಬಾಗಲಕೋಟೆಯಲ್ಲಿ ಮಾತನಾಡಿದ ರಾಮಮಂದಿರ ಟ್ರಸ್ಟ್ ನ ಸದಸ್ಯರು ಆಗಿರುವ ಪೇಜಾವರಶ್ರೀಗಳು, ಪ್ರಧಾನಿ ಮೋದಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಅಲ್ಲದೇ ರಾಮಮಂದಿರ ನಿರ್ಮಾಣದ ಸಂಪೂರ್ಣ ಹೊಣೆ ಹೊತ್ತಿದ್ದಾರೆ.

    ಹೀಗಾಗಿ ಇಂಥ ಮಹತ್ ಕಾರ್ಯದ ಹೊಣೆ ಹೊತ್ತವರು ಒಮ್ಮೊಮ್ಮೆ ಆ ಕಾರ್ಯ‌ಮುಗಿಯುವ ತನಕ ಕೂದಲು ತೆಗೆಯಲ್ಲ ನಿರ್ಧಾರ ಮಾಡುವ ಸಾಧ್ಯತೆ ಇದೆ‌. ಮೋದಿಯವರಿಗೆ ಆಧ್ಯಾತ್ಮಿಕ ವಿಚಾರದಲ್ಲಿ ನಂಬಿಕೆ ಇರೋದರಿಂದ ಅವರು ಈ ನಿರ್ಧಾರ ಮಾಡಿರಬಹುದು ಎಂದಿದ್ದಾರೆ.

    ಮೋದಿ ನೈತಿಕ ನೆಲೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವರೆಗೂ ಕೇಶ ತೆಗೆಯದ ಸಂಕಲ್ಪ ಮಾಡಿರುವ ಸಾಧ್ಯತೆ ಇದೆ ಎಂದಿದ್ದಾರೆ.ರಾಮಮಂದಿರ್ ನಿರ್ಮಾಣ ಸ್ಥಳದಲ್ಲಿ 200 ಅಡಿಯಷ್ಟು ಆಳದವರೆಗೂ ಮಣ್ಣು ಹಾಗೂ ಮರಳು ಇದ್ದು ಅದರ ಅಡಿಯಲ್ಲಿ ಪಾಯ ಹಾಕುವ ಚಿಂತನೆ ನಡೆದಿದ್ದು ಪರಿಶೀಲನೆ ನಡೆದಿದೆ ಎಂದು ವಿವರಣೆ ನೀಡಿದ್ದಾರೆ.

    ಮುಂದಿನ ಮೂರೂವರೆ ವರ್ಷದಲ್ಲಿ ರಾಮಮಂದಿರ 1,500 ಕೋಟಿ ವೆಚ್ಚದಲ್ಲಿ ರಾಮಮಂದಿರ ನಿರ್ಮಾಣವಾಗಲಿದ್ದು, ಇದರಲ್ಲಿ 500 ಕೋಟಿ ಮಂದಿರ ನಿರ್ಮಾಣಕ್ಕೆ ಹಾಗೂ 1000 ಕೋಟಿ ರಾಮಮಂದಿರದ ಸುತ್ತಮುತ್ತಲಿನ ಸ್ಥಳಗಳ ಅಭಿವೃದ್ಧಿಗೆ ಬಳಕೆಯಾಗಲಿದೆ ಎಂದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply