LATEST NEWS
ನೋಪಾರ್ಕಿಂಗ್ ನಲ್ಲಿದ್ದ ವಾಹನದ ಪೋಟೋ ಕಳುಹಿಸಿದರೆ 500ರೂ ಬಹುಮಾನ
ದೆಹಲಿ, : ನೋಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸುವವರ ವಿರುದ್ದ ಹೊಸ ಕಾನೂನು ತರಲು ಕೇಂದ್ರ ಸರಕಾರ ಮುಂದಾಗಿದ್ದು, ನೋಪಾರ್ಕಿಂಗ್ ನಲ್ಲಿ ನಿಲ್ಲಿಸಿರುವ ವಾಹನ ದ ಪೋಟೋ ಕಳುಹಿಸಿಕೊಟ್ಟರೆ ದಂಡದ 500 ರೂಪಾಯಿ ಬಹುಮಾನವಾಗಿ ನೀಡಲು ಚಿಂತನೆ ನಡೆಸಿದೆ.
ನೋಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿದರೆ ದಂಡವಾಗಿ 1000 ರೂಪಾಯಿ ಆಗಿದ್ದು, ಅದರಲ್ಲಿ 500 ಚಿತ್ರವನ್ನು ಕ್ಲಿಕ್ ಮಾಡುವ ವ್ಯಕ್ತಿಗೆ ಹೋಗುತ್ತದೆ ಎಂದು ಅವರು ಹೇಳಿದರು. ನಗರ ಭಾರತದಲ್ಲಿ ಕಾರುಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ನೋಪಾರ್ಕಿಂಗ್ ಗಳಲ್ಲಿ ವಾಹನ ನಿಲ್ಲಿಸುವುದು ದೊಡ್ಡ ಅಪಾಯ ಎಂದ ಅವರು ಕುಟುಂಬದ ಪ್ರತಿಯೊಬ್ಬ ಸದಸ್ಯರು ಕಾರು ಹೊಂದಿರುತ್ತಾರೆ. ಆದರೆ ಪಾರ್ಕಿಂಗ್ ಗೆ ಸ್ಥಳಗಳಲ್ಲಿ ನಿರ್ಮಿಸುತ್ತಿಲ್ಲ ಎಂದರು. ದೆಹಲಿಯ ಅಗಲದ ರಸ್ತೆಗಳು ಇದೀಗ ಪಾರ್ಕಿಂಗ್ ತಾಣಗಳಾಗುತ್ತಿವೆ ಎಂದು ಅವರು ಹೇಳಿದರು.