Connect with us

    KARNATAKA

    ನವದೆಹಲಿ: ವೀರ ಮಹಿಳೆ ಕಿತ್ತೂರು ರಾಣಿ ಚೆನ್ಮಮ್ಮನವರ 246ನೇ ಜನ್ಮದಿನೋತ್ಸವ ಆಚರಣೆ, ಲೋಕಸಭಾ ಸ್ಪೀಕರ್ ಒಂ ಬಿರ್ಲಾ,ಸಚಿವ ವಿ.ಸೋಮಣ್ಣ, ಪ್ರಹ್ಲಾದ್ ಜೋಶಿ ಭಾಗಿ

    ನವದೆಹಲಿ : ವೀರ ಮಹಿಳೆ ಕಿತ್ತೂರು ರಾಣಿ ಚೆನ್ಮಮ್ಮನವರ 246ನೇ ಜನ್ಮದಿನೋತ್ಸವ ಮತ್ತು ಬ್ರಿಟಿಷರ ವಿರುದ್ದ ಜಯಗಳಿಸಿದ 200 ವರ್ಷದ ವಿಜಯೋತ್ಸವವನ್ನು ನವದೆಹಲಿಯ ಸಂಸತ್ ಭವನದ ಅವರಣದಲ್ಲಿನ ಪ್ರೇರಣಾ ಸ್ಥಳದಲ್ಲಿ ಆಚರಿಸಲಾಯಿತು. ಲೋಕಸಭಾ ಸ್ಪೀಕರ್  ಓಂ ಬಿರ್ಲಾ, ಕೇಂದ್ರ ರೈಲು ಮತ್ತು ಜಲಶಕ್ತಿ ರಾಜ್ಯ ಸಚಿವ  ವಿ. ಸೋಮಣ್ಣ, ಸಚಿವ  ಪ್ರಹ್ಲಾದ್ ಜೋಶಿ ಪಾಲ್ಗೊಂಡಿದ್ದರು.

    ನವದೆಹಲಿಯ ಸಂಸತ್ ಆವರಣದಲ್ಲಿನ ಪ್ರೇರಣಾ ಸ್ಥಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ಪುತ್ಥಳಿಗೆ ಇಂದು ಬೆಳಿಗ್ಗೆ ಲೋಕಸಭಾ ಸ್ಪೀಕರ್  ಓಂ ಬಿರ್ಲಾರವರ ಘನ ಉಪಸ್ಥಿತಿಯಲ್ಲಿ ಕೇಂದ್ರ ಸಚಿವ  ಪ್ರಹ್ಲಾದ್ ಜೋಶಿಯವರು ಮತ್ತು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪುಷ್ಪಾರ್ಚನೆಯೊಂದಿಗೆ ಗೌರವ ಸಲ್ಲಿಸಿದರು.

    ಕಿತ್ತೂರು ರಾಣಿ ಚೆನ್ಮಮ್ಮ ಬ್ರಿಟಿಷ್ರೊಂದಿಗೆ ಹೋರಾಟ ನಡೆಸಿದ ರಾಷ್ಟ್ರದ ಪ್ರಪ್ರಥಮ ಮಹಿಳೆಯರಲ್ಲಿ ಪ್ರಮುಖರು. ಇವರ ದಿಟ್ಟ ಹೋರಾಟ ಸಾವಿರಾರು ಭಾರತೀಯರನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರರೇಪಿಸಿತ್ತು ಎಂದು ಕೇಂದ್ರ ಸಚಿವ ಸೋಮಣ್ಣನವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

    ಇಂದು ಚೆನ್ಮಮ್ನನವರ ಪುತ್ಥಳಿಗೆ ರಾಷ್ಟ್ರ ರಾಜಧಾನಿಯ ಸಂಸತ್ತಿನಲ್ಲಿ ಗೌರವ ಸಮರ್ಪಿಸಿರುವುದು ಕರ್ನಾಟಕದ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ ಎಂದು ಕೇಂದ್ರ ಸಚಿವ ಸೋಮಣ್ಣ ತಿಳಿಸಿದ್ದಾರೆ.

    ಕಿತ್ತೂರು ರಾಣಿ ಚೆನ್ನಮ್ಮನವರ 246ನೇ ಜನ್ಮದಿನೋತ್ಸವ ಮತ್ತು ಬ್ರಿಟಿಷರ ವಿರುದ್ದ ಹೊರಾಡಿ ಜಯಗಳಿಸಿ ಸೆಂಟ್ ತ್ಯಾಕೆರೆಯನ್ನು ಕೊಂದ 200 ವರುಷದ ಈ ವಿಜಯೋತ್ಸವದ ಸಂದರ್ಭದಲ್ಲಿ ಲೋಕಸಭೆಯ ಸ್ಪೀಕರ್  ಓಂ ಬಿರ್ಲಾ ಅವರು ಚೆನ್ನಮ್ಮನವರ ಪುತ್ಥಳಿಗೆ ಗೌರವ ಸಲ್ಲಿಸಿದ್ದರಿಂದ ರಾಣಿ ಚನ್ನಮ್ಮರ ಖ್ಯಾತಿ ಇಂದು ಇಮ್ಮಡಿಗೊಂಡಿದೆ, ಕಿತ್ತೂರು ರಾಣಿ ಚೆನ್ಮಮ್ಮ ಭಾರತದ ಆಸ್ತಿ, ನಾರಿ ಶಕ್ತಿಯ ಪ್ರೇರಣೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಬಣ್ಣಿಸಿದ್ದಾರೆ.

    ಈ ಗೌರವ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಅತೀ ಅಮೂಲ್ಯ ಸಮಯವನ್ನು ನೀಡಿದ ಲೋಕಸಭಾ ಸ್ಪೀಕರ್ ಶ್ರೀ ಒಂ ಬಿರ್ಲಾ ಅವರಿಗೆ ಕನ್ನಡ ನಾಡಿನ ಸಮಸ್ತ ಜನತೆಯ ಪರವಾಗಿ ಹಾರ್ದಿಕ ಅಭಿನಂದನೆಯನ್ನು ಕೇಂದ್ರ ಸಚಿವ ಸೋಮಣ್ಣ ತಿಳಿಸಿದ್ದಾರೆ.

    ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಕಿತ್ತೂರು ರಾಣಿ ಚೆನ್ನಮ್ಮನ ವ್ಯಕ್ತಿತ್ವ ಮಹಿಳಾ ಸಬಲೀಕರಣದ ಚಿಹ್ನೆಯಾಗಿ ಎಲ್ಲರನ್ನು ಪ್ರೇರೇಪಿಸುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಈ ಸ್ಮರಣೀಯ ದಿವಸದಂದು ಭಾರತ ಸರ್ಕಾರ ರಾಣಿ ಚೆನ್ಮಮ್ಮನವರ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದ್ದು, ಈ ಸಮಯೋಚಿತ ನಿರ್ಧಾರಕ್ಕಾಗಿ ಸನ್ಮಾನ್ಯ ಪ್ರಧಾನ ಮಂತ್ರಿ  ನರೇಂದ್ರ ಮೋದಿಯವರಿಗೆ ಕನ್ನಡ ನಾಡಿನ ಸಮಸ್ತ ಜನತೆಯ ಪರವಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಅಭಿನಂದನೆ ತಿಳಿಸಿದ್ದಾರೆ.

    ಈರಣ್ಣ ಕಡಾಡಿ, ರಾಜ್ಯ ಸಭಾ ಸದಸ್ಯರು, ಶಾಸಕರಾದ  ಅರವಿಂದ ಬೆಲ್ಲದ,  ಬಸವನಗೌಡ ಪಾಟೀಲ್ ಯತ್ನಾಳ್, ದೆಹಲಿ ಕನ್ನಡ ಸಂಘದ ಅಧ್ಯಕ್ಷ  ಸಿ. ಎಮ್. ನಾಗರಾಜ್, ರಾಜ್ಯದಿಂದ ಆಗಮಿಸಿದ  ವಚನಾನಂದ ಸ್ವಾಮಿ,  ಬಸವಜಯ ಮೃತ್ಯುಂಜಯ ಸ್ವಾಮಿಜಿ, ಅಪಾರ ಸಂಖ್ಯೆಯಲ್ಲಿ ಸ್ವ ಇಚ್ಛೆಯಿಂದ ದೆಹಲಿ ಕನ್ನಡಿಗರು, ಲೋಕಸಭೆ ಹಾಗೂ ರೇಲ್ವೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *