LATEST NEWS
ಹಕ್ಕುಪತ್ರ ನೀಡಿ ಜನಪರವಾಗಿ ಆಡಳಿತ ನೀಡಲು ಅಧಿಕಾರಿಗಳಿಗೆ ಸೂಚನೆ – ಕಾಗೋಡು ತಿಮ್ಮಪ್ಪ
ಹಕ್ಕುಪತ್ರ ನೀಡಿ ಜನಪರವಾಗಿ ಆಡಳಿತ ನೀಡಲು ಅಧಿಕಾರಿಗಳಿಗೆ ಸೂಚನೆ – ಕಾಗೋಡು ತಿಮ್ಮಪ್ಪ
ಉಡುಪಿ ಫೆಬ್ರವರಿ 14: ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ 50 ತಾಲೂಕುಗಳನ್ನು ಅಧಿಕೃತವಾಗಿ ರಚಿಸಲಾಗಿದ್ದು, ಇಂದು ಬೈಂದೂರು, ಬ್ರಹ್ಮಾವರ, ಕಾಪುವಿನಲ್ಲಿ ತಾಲೂಕು ರಚನೆಯನ್ನು ಮಾಡಲಾಗಿದೆ.
ಕಂದಾಯ ಇಲಾಖೆಯನ್ನು ಕ್ರಿಯಾಶೀಲವಾಗಿರಿಸುವ ಬಗ್ಗೆ ಹಲವು ಸುಧಾರಣೆಗಳನ್ನು ಕೈಗೊಳ್ಳಲಾಗಿದ್ದು, ಸ್ವಚ್ಚ ಪಾರದರ್ಶಕ ಆಡಳಿತ ಸರ್ಕಾರದ ಗುರಿ ಎಂಬ ಘೋಷಣೆಯನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಅವರಿಂದು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಜನಪರ ಆಡಳಿತಕ್ಕೆ ತಮ್ಮ ಕಾಲದಲ್ಲಿ ಒತ್ತು ನೀಡಿದ್ದು, ಜನರ ಭೂಮಿ ಹಕ್ಕು ತಮ್ಮ ಕನಸು, ಹೋರಾಟ ಎಂಬುದನ್ನು ಸ್ಮರಿಸಿದರು. ಜನರೆಡೆಗೆ ಅಧಿಕಾರಿಗಳು ತೆರಳಿ ಬಡವರ ಪರ ಕೆಲಸ ಮಾಡಿ; ಅರ್ಹರಿಗೆ ಹಕ್ಕುಪತ್ರ ನೀಡಿ ; ಸಾಮಾಜಿಕ ಬದಲಾವಣೆಗೆ ಹೊಸ ಆಲೋಚನೆಯನ್ನು ಕೊಡಿ; ಆಡಳಿತವಿರುವುದೇ ಜನರಿಗೋಸ್ಕರ ಎಂಬುದನ್ನು ಮರೆಯದಿರಿ ಎಂದು ಅಧಿಕಾರಿಗಳಿಗೆ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಮೋದ್ ಮಧ್ವರಾಜ್ ಅವರು ಪ್ರಾಸ್ತಾವಿಕ ನುಡಿಗಳಲ್ಲಿ ಕಂದಾಯ ಇಲಾಖೆಯ ಮಹತ್ವ ವಿವರಿಸಿದರು.
You must be logged in to post a comment Login