Connect with us

LATEST NEWS

ಗ್ರೀನ್ ಝೋನ್ ಉಡುಪಿಯಲ್ಲಿ 5 ಮಂದಿಗೆ ಕೊರೊನಾ ಸೊಂಕು ದೃಢ

ಗ್ರೀನ್ ಝೋನ್ ಉಡುಪಿಯಲ್ಲಿ 5 ಮಂದಿಗೆ ಕೊರೊನಾ ಸೊಂಕು ದೃಢ

ಉಡುಪಿ ಮೇ .15: ಗ್ರೀನ್ ಝೋನ್ ನಲ್ಲಿದ್ದ ಉಡುಪಿಗೆ ಇಂದು ಕರಾಳ ದಿನವಾಗಿದ್ದು, ಯಾವುದೇ ಕೋವಿಡ್-19 ಸೋಂಕು ಪ್ರಕರಣವಿಲ್ಲದೆ ನಿರಾತಂಕದಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 5 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ.

ದುಬೈನಿಂದ ಮೇ 15ರಂದು ಆಗಮಿಸಿದ ಉಡುಪಿ ಜಿಲ್ಲೆಯ ಆರು ಮಂದಿಯಲ್ಲಿ ಕೋವಿಡ್-19 ಸೋಂಕು ದೃಡಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಕೋವಿಡ್-19 ಕಾರಣಕ್ಕಾಗಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನುಮರಳಿ ಭಾರತಕ್ಕೆ ತರುವ ಕಾರ್ಯಾಚರಣೆಯಡಿ 176 ಮಂದಿ ಮಂಗಳವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು.

ಈ ಪೈಕಿ ಉಡುಪಿ ಜಿಲ್ಲೆಗೆ ಸೇರಿದ 49 ಮಂದಿಯನ್ನು ಜಿಲ್ಲೆಯ ಹೊಟೇಲ್‌ ನಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಇವರ ಗಂಟದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಇಂದು ಬಂದಿದೆ. ಈ ಹಿನ್ನಲೆಯಲ್ಲಿ 5 ಮಂದಿಯನ್ನು ಅವರು ಉಳಿದುಕೊಂಡಿರುವ ಹೊಟೇಲ್‌ನಿಂದ ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *