Connect with us

    LATEST NEWS

    ನೇಪಾಳ ವಿಮಾನ ದುರಂತ – ಐವರು ಭಾರತೀಯರು ಸೇರಿ 68 ಮಂದಿ ದುರ್ಮರಣ

    ಕಠ್ಮಂಡು: ನೇಪಾಳದಲ್ಲಿ ಪ್ರಯಾಣಿಕ ವಿಮಾನ ದುರಂತಕ್ಕಿಡಾಗಿದ್ದು, 72 ಜನರಿದ್ದ ವಿಮಾನದಲ್ಲಿ 68 ಮಂದಿ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಯೇತಿ ಏರ್‌ಲೈನ್ಸ್‌ನ (9N-ANC ATR-72) ಪೋಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ನದಿಯ ದಡದಲ್ಲಿ ಪತನಗೊಂಡಿದ್ದು, 68 ಮಂದಿ ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ. ಇವರಲ್ಲಿ ಐವರು ಭಾರತೀಯರು ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


    ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಯೇತಿ ಏರ್‌ಲೈನ್ಸ್‌ನ (9N-ANC ATR-72) ವಿಮಾನ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:33 ಕ್ಕೆ ಟೇಕ್ ಆಫ್ ಆಗಿತ್ತು. ಪೋಖರಾ ಹಿಮಾಲಯ ರಾಷ್ಟ್ರದ ಪ್ರಮುಖ ಪ್ರವಾಸಿ ತಾಣವಾಗಿದೆ.


    ವಿಮಾನದಲ್ಲಿ ಒಟ್ಟು 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಗಳಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಪ್ರಯಾಣಿಕರಲ್ಲಿ 10 ವಿದೇಶಿಗರು ಸೇರಿದ್ದಾರೆ ಎಂದು ನೇಪಾಳದ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ. ವಿಮಾನ ಪತನಕ್ಕೀಡಾದ ಸ್ಥಳದಿಂದ ಕನಿಷ್ಠ 68 ಮೃತದೇಹಗಳನ್ನು ಹೊರತೆಗೆಯಲಾಗಿದೆ. ವಿಮಾನದಲ್ಲಿದ್ದ ಒಟ್ಟು 15 ವಿದೇಶಿ ಪ್ರಜೆಗಳಲ್ಲಿ ಐವರು ಭಾರತೀಯರು ಸೇರಿದ್ದಾರೆ ಎಂದು ವರದಿಯಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply