FILM
ನೆನಪಿರಲಿ ಪ್ರೇಮ್ ಮಗಳು ಸ್ಯಾಂಡಲ್ ವುಡ್ ಗೆ ಎಂಟ್ರಿ

ಬೆಂಗಳೂರು ನವೆಂಬರ್ 28: ಖ್ಯಾತ ಸಿನೆಮಾ ನಟ ನೆನಪಿರಲಿ ಪ್ರೇಮ್ ಮಗಳು ಇದೀಗ ಸಿನೆಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಉಮೇಶ್ ಕೆ.ಕೃಪ ಆ್ಯಕ್ಷನ್ ಕಟ್ ಹೇಳಲಿರುವ, ನಟ ‘ಡಾಲಿ’ ಧನಂಜಯ ಅವರ ಡಾಲಿ ಪಿಕ್ಚರ್ಸ್‌ನ ಹೊಸ ಪ್ರಾಜೆಕ್ಟ್ ‘ಟಗರು ಪಲ್ಯ’ ದಲ್ಲಿ ನಾಯಕಿಯಾಗಿ ನೆನಪಿರಲಿ’ ಖ್ಯಾತಿಯ ಲವ್‌ಲಿ ಸ್ಟಾರ್ ಪ್ರೇಮ್ ಮಗಳು ಅಮೃತ ಪ್ರೇಮ್ ಆಯ್ಕೆಯಾಗಿದ್ದಾರೆ.
ಸದ್ಯ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು ಅಮೃತ ಲುಕ್ ಗಮನ ಸೆಳೆಯುತ್ತಿದೆ.

ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರೇಮ್, ‘ಒಬ್ಬ ನಟನಾಗಿ, ಮಗಳು ಚಿತ್ರರಂಗಕ್ಕೆ ಬರುತ್ತಿರುವುದಕ್ಕೆ ಖುಷಿ ಇದೆ. ಆಕೆ ಓದಿನಲ್ಲೂ ಬುದ್ಧಿವಂತೆ. ಈಗ ನಟಿಯಾಗಿ ಸಿನಿಮಾಗೂ ಬರುತ್ತಿದ್ದಾಳೆ. ಚಿತ್ರದ ಪಾತ್ರಕ್ಕಾಗಿ ಹಲವು ದಿನಗಳಿಂದ ಸಿದ್ಧತೆ ನಡೆಸುತ್ತಿದ್ದಾಳೆ. ಚಿತ್ರದ ಕಥೆ ಕೇಳಿದ ಮೇಲೆ ಆಕೆಗೆ ಚಿತ್ರರಂಗಕ್ಕೆ ಇಳಿಯಬೇಡ ಎನ್ನಲಾಗಲಿಲ್ಲ’ ಎಂದರು.
ಪ್ರಸ್ತುತ ಬಯೋ ಮೆಡಿಕಲ್ ಎಂಜಿನಿಯರಿಂಗ್ ಓದುತ್ತಿರುವ ಅಮೃತ, ಓದು ಮುಂದುವರಿಸುವುದರ ಜೊತೆಗೆ ಚಿತ್ರರಂಗದಲ್ಲೂ ತೊಡಗಿಸಿಕೊಳ್ಳಲಿದ್ದಾರೆ.