BELTHANGADI
ಬೆಳ್ತಂಗಡಿ: ಆ್ಯಸಿಡ್ ಕುಡಿದು ಮಹಿಳೆ ಜೀವಾಂತ್ಯ…
ಬೆಳ್ತಂಗಡಿ, ನವೆಂಬರ್ 28: ಮಹಿಳೆಯೊಬ್ಬರು ರಬ್ಬರ್‌ಗೆ ಬಳಸುವ ಆ್ಯಸಿಡ್ ಕುಡಿದು ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಪುದುವೆಟ್ಟುವಿನಲ್ಲಿ ನಡೆದಿದೆ.
ಪುದುವೆಟ್ಟು ಗ್ರಾಮದ ಮೇರ್ಲ ನಿವಾಸಿ ಬಿಂದು (48) ಎಂಬ ಮಹಿಳೆ ಆತ್ಮಹತ್ಯೆಗೊಳಗಾದ ದುರ್ದೈವಿ. ನ.27 ರಂದು ರಬ್ಬರ್‌ಗೆ ಬಳಸುವ ಆ್ಯಸಿಡ್ ಕುಡಿದು ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಆ್ಯಸಿಡ್ ಕುಡಿಯಲು ಕಾರಣವೇನೆಂಬುದು ಇನ್ನಷ್ಟೆ ತಿಳಿದುಬರಬೇಕಾಗಿದೆ. ಮೃತರು ಪುದುವೆಟ್ಟು ಗ್ರಾಮದ ಮೇರ್ಲ ನಿವಾಸಿ ರವಿ ಎಂಬವರ ಪತ್ನಿ. ಮೃತರು ಪತಿ ರವಿ, ಇಬ್ಬರು ಮಕ್ಕಳಾದ ವಿನೀಶ್ ಮತ್ತು ವಿಜಿದ ಇವರನ್ನು ಅಗಲಿದ್ದಾರೆ.