KARNATAKA
ನೇಜಾರು ಹತ್ಯಾಕಾಂಡ , ಫೇಸ್ಬುಕ್ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಂಚಿದ ಶಿವಮೊಗ್ಗದ ಹಫೀಜ್ ಮೊಹಮ್ಮದ್ ವಿರುದ್ದ FIR..!

ಉಡುಪಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಪ್ರಕರಣ ಸಂಬಂಧ ಫೇಸ್ಬುಕ್ನಲ್ಲಿ ಪ್ರಚೋದನಾಕಾರಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದರ ಹಿನ್ನೆಲೆಯಲ್ಲಿ ಹಫೀಜ್ ಎಂಬಾತನ ಮೇಲೆ ಪೊಲೀಸರು ಸ್ವಯಂ ದೂರು ದಾಖಲು ಮಾಡಿದ್ದಾರೆ.
ಶಿವಮೊಗ್ಗ ಮೂಲದ ಹಫೀಜ್ ಮೊಹಮ್ಮದ್ ವಿರುದ್ಧ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.ಉಡುಪಿ ನೇಜಾರಿನ ನಾಲ್ವರ ಕೊಲೆ ಪ್ರಕರಣ ಸಂಬಂಧ ಹಫೀಜ್ ಮೊಹಮದ್ ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಪ್ರಚೋದನಾಕಾರಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದ. ಪ್ರಿಪರೇಶನ್ ಇಲ್ಲದೇ ಪ್ರವೀಣ್ ಚೌಗಲೆಯನ್ನು ಕೊಲ್ಲುವ ಒಂದು ಸುಲಭದ ದಾರಿಯನ್ನು ನೇಜಾರಿನವರು ಕಳೆದುಕೊಂಡರು ಎಂದು ಘಟನೆ ಉಲ್ಲೇಖಿಸಿ, ಪೋಸ್ಟ್ ಹಾಕಿದ್ದ, ಅಪರಾಧ ಕೃತ್ಯಕ್ಕೆ ಪ್ರಚೋದನೆ, ಸಾರ್ವಜನಿಕ ಶಾಂತಿ ಕದಡುವ ಸಂಬಂಧ ಪೋಸ್ಟ್ ಹಿನ್ನೆಲೆ ಐಪಿಸಿ 155, 505(2) ಕಾಯ್ದೆಯಡಿ ಸುಮೋಟೊ ಕೇಸ್ ದಾಖಲಿಸಲಾಗಿದೆ.
