Connect with us

LATEST NEWS

ಕಾರ್ಕಳ : ಹಾಡಹಗಲೇ ವೃದ್ಧೆಯ ಸರ, ನಗದು ಲಪಟಾಯಿಸಿದ ವಂಚಕ ಪರಾರಿ

ಕಾರ್ಕಳ : ಕಾರ್ಕಳ ಪೇಟೆಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬ ವೃದ್ಧ ಮಹಿಳೆಗೆ ಮಂಕುಬೂದಿ ಎರಚಿ ನಗ- ನಗದು ಲಪಟಾಯಿಸಿದ ಘಟನೆ ನಡೆದಿದೆ.

ಸುಶೀಲ(77) ಅಪರಿಚಿತನಿಂದ  ನಗ -ನಗದು ಕಳಕೊಂಡ ಮಹಿಳೆಯಾಗಿದ್ದಾಳೆ.  ಸುಶೀಲ ಕಾರ್ಕಳ ಬಸ್‌ಸ್ಟ್ಯಾಂಡ್‌ ಬಳಿಯಿರುವ ಕ್ಲಿನಿಕ್‌ಗೆ ನಡೆದುಕೊಂಡು ಹೋಗುತ್ತಿರುವಾಗ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಬಂದು ನಿಮ್ಮ ಮೊಬೈಲ್ ಫೋನ್ ಕೊಡಿ ನಿಮ್ಮ ಮಗನ ಹತ್ತಿರ ಮಾತನಾಡಲಿಕ್ಕಿದೆ ಎಂದು ಹೇಳಿ ಫೊನ್ ತೆಗೆದುಕೊಂಡು ಮಾತನಾಡಿದಂತೆ ಮಾಡಿ ಮಗ ಫೋನ್ ತೆಗೆಯುತ್ತಿಲ್ಲ ಎಂದು ಹೇಳಿ ಮೊಬೈಲ್ ಫೋನ್ ತೆಗೆದುಕೊಂಡು ಮುಂದಕ್ಕೆ ಹೋಗಿದ್ದಾನೆ. ಮಹಿಳೆ ಅವನನ್ನು ಹಿಂಬಾಲಿಸಿದಾಗ ಅವನು ಮಾರ್ಕೆಟ್ ರಸ್ತೆ ಕಡೆಗೆ ನಡೆದುಕೊಂಡು ಹೋಗಿ ಅಲ್ಲಿ ಒಂದು ಅಂಗಡಿಯ ಮೆಟ್ಟಿಲಿನಲ್ಲಿ ಮಹಿಳೆಯನ್ನು ಕುಳ್ಳಿರಿಸಿ 500 ರೂ. ಕೊಡಿ ಈಗ ಕೊಡುತ್ತೇನೆಂದು ಹೇಳಿ ಪರ್ಸಿನಿಂದ 700 ರೂ. ತೆಗೆದುಕೊಂಡು ಈಗ ಬರುತ್ತೇನೆಂದು ಹೇಳಿ ಹೋಗಿದ್ದಾನೆ. ಸ್ವಲ್ಪಹೊತ್ತಿನಲ್ಲಿ ವಾಪಸು ಬಂದು ನಿಮ್ಮ ಚೈನ್ ಕೊಡಿ ನನ್ನ ತಾಯಿಗೆ ಅದೇ ರೀತಿಯ ಚೈನ್ ಮಾಡಿಸಲಿಕ್ಕಿದೆ ಎಂದು ಹೇಳಿ ಒಂದೂವರೆ ಪವನ್ ತೂಕದ ಹವಳದ ಚಿನ್ನದ ಸರವನ್ನು ತೆಗೆದುಕೊಂಡು ಈಗ ಬರುತ್ತೇನೆಂದು ಹೇಳಿ ಪಲಾಯನ ಮಾಡಿದ್ದಾನೆ. ಮೊಬೈಲ್ ಫೋನ್, ನಗದು ರೂಪಾಯಿ 700 ರೂ. ಮತ್ತು 30,000 ರೂ. ಮೌಲ್ಯದ ಹವಳ ಅಳವಡಿಸಿದ ಚಿನ್ನದ ಸರ ಮಹಿಳೆ ಕಳೆದುಕೊಂಡಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Advertisement
Click to comment

You must be logged in to post a comment Login

Leave a Reply