Connect with us

  LATEST NEWS

  ನೆಹರೂ ಮೈದಾನ ಕೊಲೆ ಪ್ರಕರಣ – ನಾಲ್ವರು ಆರೋಪಿಗಳು ಅರೆಸ್ಟ್

  ಮಂಗಳೂರು ಎಪ್ರಿಲ್ 19: ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಕಾರು ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ತಿರುವನಂತಪುರದ ಪ್ರಶಾಂತ್ , ವಿಟ್ಲದ ಶರತ್ ವಿ, ಕುಶಾಲನಗರದ ಜಿಕೆ ರವಿಕುಮಾರ್ ಯಾನೆ ನಂದೀಶ್ , ಕೊಣಾಜೆಯ ವಿಜಯ ಎಂದು ಗುರುತಿಸಲಾಗಿದೆ.


  ಬಿಜೆಪಿಯ ಸಕ್ರಿಯ ಕಾರ್ಯಕರ್ತ ಹಾಗೂ ಕಾರು ಚಾಲಕನಾಗಿದ್ದ ಜನಾರ್ದನ ಪೂಜಾರಿ ಮಂಗಳವಾರ ಸಂಜೆ 5ರ ವೇಳೆಗೆ ನೆಹರು ಮೈದಾನದ ಬಳಿ ನಿದ್ದೆ ಮಾಡುತ್ತಿದ್ದಾಗ ಆರೋಪಿಗಳು ಮೊಬೈಲ್ ಸುಲಿಗೆ ಮಾಡಲು ಯತ್ನಿಸಿದ್ದರು. ಇದಕ್ಕೆ ಜನಾರ್ದನ ಪೂಜಾರಿ ಪ್ರತಿರೋಧ ತೋರಿದಾಗ ಆರೋಪಿಗಳ ಪೈಕಿ ಒಬ್ಬಾತ ಜನಾರ್ದನ ಪೂಜಾರಿಯ ಎದೆಗೆ ಕಾಲಿನಿಂದ ಒದ್ದ ಎನ್ನಲಾಗಿದೆ.ಇದರಿಂದ ಜನಾರ್ದನ ಪೂಜಾರಿ 6 ಅಡಿ ಆಳಕ್ಕೆ ಬಿದ್ದಿದ್ದು, ಅಲ್ಲಿಗೂ ಧುಮುಕಿದ ಆರೋಪಿಗಳು ಕೈಯಿಂದ ಹಲ್ಲೆ ನಡೆಸಿ, ಕಾಲಿನಿಂದ ಒದ್ದು ಮೊಬೈಲ್ ಕಿತ್ತು ಪರಾರಿಯಾಗಿದ್ದರು.

  ಈ ಸಂದರ್ಭ ಜನಾರ್ದನ ಪೂಜಾರಿ ಆಘಾತದಿಂದ ಮೃತಪಟ್ಟಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply