Connect with us

LATEST NEWS

ನೀರುಮಾರ್ಗ ರಿಕ್ಷಾ ಚಾಲಕ ಸಂತೋಷ್ ಮೇಲೆ ತಲವಾರ್ ಹಲ್ಲೆ ಪ್ರಕರಣ 9 ಮಂದಿ ಆರೆಸ್ಟ್

ನೀರುಮಾರ್ಗ ರಿಕ್ಷಾ ಚಾಲಕ ಸಂತೋಷ್ ಮೇಲೆ ತಲವಾರ್ ಹಲ್ಲೆ ಪ್ರಕರಣ 9 ಮಂದಿ ಆರೆಸ್ಟ್

ಮಂಗಳೂರು ಅಕ್ಟೋಬರ್ 22: ಮಂಗಳೂರು ಹೊರವಲಯದ ನೀರುಮಾರ್ಗ ಪಡು ಎಂಬಲ್ಲಿ ರಿಕ್ಷಾ ಚಾಲಕ ಸಂತೋಷ್ ಮೇಲೆ ತಲವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ 9 ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ನಿತಿನ್ ಪೂಜಾರಿ, ಧನರಾಜ್, ಶಿವಾನಂದ ಆಚಾರಿ, ಗಣೇಶ್, ಜೀವನ್ ಪೂಜಾರಿ, ಸಂತೋಷ್ ಪೂಜಾರಿ, ಧೀರಜ್ ಸಪಲ್ಯ, ರಾಘವೇಂದ್ರ ಪೂಜಾರಿ, ಪ್ರಾಣೇಶ್ ಪೂಜಾರಿ ಎಂದು ಗುರುತಿಸಲಾಗಿದೆ.

ಸ್ಥಳೀಯ ದೈವಸ್ಥಾನದಲ್ಲಿ ಮೋಜು-ಮಸ್ತಿ ನಡೆಸುತ್ತಿದ್ದ ಯುವಕರನ್ನು ಸ್ಥಳೀಯ ನಿವಾಸಿಯಾದ ಸಂತೋಷ್ ವಿರೋಧಿಸಿದ್ದ ಈ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನೀರು ಮಾರ್ಗದಿಂದ ತನ್ನ ಮನೆ ಬಿತ್ತುಪಾದೆಗೆ ತೆರಳುತ್ತಿದ್ದ ಸಂದರ್ಭ , ಸ್ಕೂಟರ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರ್ಗ ಮಧ್ಯೆ ರಿಕ್ಷಾವನ್ನು ಅಡ್ಡಗಟ್ಟಿ ತಲವಾರಿನಿಂದ ದಾಳಿ ನಡೆಸಿದ್ದರು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಪೊಲೀಸರು ಈಗಾಗಲೇ ಬಂಧಿಸಿದ್ದರು. ಈಗ ಮತ್ತೆ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *