Connect with us

    LATEST NEWS

    ತೊಕ್ಕೊಟ್ಟು ರೈಲು ಡಿಕ್ಕಿ ಹೊಡೆದು ಅಪರಿಚಿತ ಸ್ಥಳದಲ್ಲೇ ಸಾವು

    ತೊಕ್ಕೊಟ್ಟು ರೈಲು ಡಿಕ್ಕಿ ಹೊಡೆದು ಅಪರಿಚಿತ ಸ್ಥಳದಲ್ಲೇ ಸಾವು

    ಉಳ್ಳಾಲ ಅಕ್ಟೋಬರ್ 22: ರೈಲು ಹಳಿ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ತೊಕ್ಕೊಟ್ಟು ಬಳಿ ನಡೆದಿದೆ.

    ಮೃತ ವ್ಯಕ್ತಿ ರೈಲು ಬರುತ್ತಿದ್ದರೂ ಲೆಕ್ಕಿಸದೇ ರೈಲ್ವೆ ಹಳಿ ದಾಟಲು ಹೋದಾಗ ಈ ದುರ್ಘಟನೆ ನಡೆದಿದೆ. ಮೃತರ ಗುರುತು ಇನ್ನು ಪತ್ತೆಯಾಗಿಲ್ಲ. ಕಳೆದ ಶುಕ್ರವಾರ ಇದೇ ಪರಿಸರದಲ್ಲಿ ಭಾರಿ ಮಳೆಯ ಆರ್ಭಟಕ್ಕೆ ಹೆದರಿ ರೈಲು ಹಳಿ ಹೋಗಿ ದಾಟಲು ರೈಲು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದರು. ಇಂದು ಮತ್ತೆ ರೈಲು ಹಳಿ ದಾಟಲು ಹೋಗಿ ಮತ್ತೊಂದು ಜೀವ ಬಲಿಯಾಗಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply