LATEST NEWS
ರಾಷ್ಟ್ರಧ್ವಜದ ಮೇಲೆ ಆಟೋಗ್ರಾಫ್ ಬರೆಯಲು ನಿರಾಕರಿಸಿದ ನೀರಜ್ ಚೋಪ್ರಾ

ನವದೆಹಲಿ, ಆಗಸ್ಟ್ 29: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇಡೀ ದೇಶದ ಮೆಚ್ಚುಗೆಗೆ ಪಾತ್ರರಾದ ನೀರಜ್ ಚೋಪ್ರಾ, ಇದೀಗ ಮತ್ತೊಮ್ಮೆ ದೇಶದ ಜನತೆಯ ಮನ ಗೆದ್ದಿದ್ದಾರೆ.
ರಾಷ್ಟ್ರಧ್ವಜದ ಮೇಲೆ ಸಹಿ ಹಾಕುವಂತೆ ಅಭಿಮಾನಿಯೊಬ್ಬರು ಕೋರಿಕೊಂಡರು ಅದನ್ನು ನಯವಾಗಿ ತಿರಸ್ಕರಿಸುವ ಮೂಲಕ ಕ್ರೀಡಾ ಬದ್ಧತೆ ಮತ್ತು ರಾಷ್ಟ್ರಾಭಿಮಾನವನ್ನು ಎತ್ತಿಹಿಡಿದ್ದಾರೆ.

ಈ ಬಗ್ಗೆ ಪತ್ರಕರ್ತ ಜೋನಥನ್ ಸೆಲ್ವರಾಜ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ‘ಹಂಗೇರಿಯಾದ ಮಹಿಳಾ ಅಭಿಮಾನಿಯೊಬ್ಬರು ನೀರಜ್ ಅವರ ಬಳಿ ಬಂದು ಆಟೋಗ್ರಾಫ್ ಕೇಳುತ್ತಾರೆ. ಇದಕ್ಕೆ ಒಪ್ಪಿಗೆ ನೀಡಿದ ನೀರಜ್ ಚೋಪ್ರಾ ಎಲ್ಲಿ ಸಹಿ ಮಾಡಬೇಕೆಂದು ಕೇಳುತ್ತಾರೆ. ಆಗ ಆಕೆ ಭಾರತದ ರಾಷ್ಟ್ರಧ್ವಜವನ್ನು ತೋರಿಸುತ್ತಾರೆ. ಅಲ್ಲಿ ಸಹಿ ಮಾಡಲು ಸಾಧ್ಯವಿಲ್ಲ (ವಹಾ ನಹಿ ಸೈನ್ ಕರ್ ಸಕ್ತಾ) ಎಂದು ನೀರಜ್ ಹೇಳುತ್ತಾರೆ. ನಂತರ ಆಕೆಯ ಟೀ ಶರ್ಟ್ ಮೇಲೆ ಸಹಿ ಮಾಡುತ್ತಾರೆ’ ಎಂದು ಹೇಳಿದರು.
https://twitter.com/jon_selvaraj/status/1696000837003174122?ref_src=twsrc%5Etfw%7Ctwcamp%5Etweetembed%7Ctwterm%5E1696000837003174122%7Ctwgr%5Eb82f976818087ec5e5f05d80b2a36a9b4ac35423%7Ctwcon%5Es1_&ref_url=https%3A%2F%2Fwww.prajavani.net%2Fsports%2Fother-sports%2Fneeraj-chopra-wins-hearts-as-he-refuses-to-sign-on-indian-flag-2458631
ಚೋಪ್ರಾ ಅವರು ಮಹಿಳಾ ಅಭಿಮಾನಿಯ ಟೀ ಶರ್ಟ್‌ಗೆ ಸಹಿ ಹಾಕಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜವನ್ನು ಸರಿಯಾದ ರೀತಿಯಲ್ಲಿ ಮಡಿಚಿಡುವುದರ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.
ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಜಯಿಸಿದ್ದ ನೀರಜ್ ಚೋಪ್ರಾ ಡೈಮಂಡ್ ಲೀಗ್‌ನಲ್ಲೂ ಚಾಂಪಿಯನ್ ಆಗಿದ್ದರು. ಇದೀಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ನೀರಜ್ ಜಾವೆಲಿನ್‌ಗೆ ಕಿಂಗ್ ಎನಿಸಿಕೊಂಡಿದ್ದಾರೆ.