National
ಕಸ್ಟಮ್ಸ್ ನಿಂದ ಬಂತು ಆತಂಕಕಾರಿ ಮಾಹಿತಿ – ಚೆನ್ನೈನಲ್ಲಿದೆ 740 ಟನ್ ಅಮೋನಿಯಂ ನೈಟ್ರೇಟ್
ಕಳೆದ ಎರಡು ದಿನಗಳ ಹಿಂದೆ ಲೆಬನಾನ್ನಲ್ಲಿ ಸಂಭವಿಸಿರುವ ಭೀಕರ ಸ್ಫೋಟ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಈ ಮಹಾದುರಂತದಲ್ಲಿ 135ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ 3 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಆಘಾತಕಾರಿ ವಿಚಾರ ಏನಂದರೆ, ಇಂತಹುದೇ ದುರಂತ ಸಂಭವಿಸಬಹುದಾಗಿದ್ದ ಸ್ಫೋಟಕ ವಸ್ತುಗಳು ತಮಿಳುನಾಡಿನ ಚೆನ್ನೈನ ಹೊರವಲಯದಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದೆ.
ಚೆನೈನಲ್ಲಿ ಅಮೋನಿಯಂ ನೈಟ್ರೇಟ್ ಇರುವ ಮಾಹಿತಿ ಹೊರ ಬರುತ್ತಿದ್ದಂತೆ ಚೆನೈನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆ ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು ಹಲವಾರು ವರ್ಷಗಳಿಂದ ವಶಕ್ಕೆ ಪಡೆದುಕೊಂಡು ಇಡಲಾಗಿರುವ ಬರೋಬ್ಬರಿ 740 ಟನ್ಗೂ ಅಧಿಕ ಅಮೋನಿಯಂ ನೈಟ್ರೇಟ್ ನ್ನು ಕಾರ್ಗೋ ಕಂಟೈನರ್ ನಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಹಾಗೂ ಈ ಕಾರ್ಗೋ ಇಟ್ಟಿರುವ ಪ್ರದೇಶ ಚೆನೈ ಸಿಟಿಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿದೆ. ಅಲ್ಲದೆ ಅಮೋನಿಯಂ ನೈಟ್ರೇಟ್ ಇರುವ ಕಂಟೈನರ್ ಇರುವ ಪ್ರದೇಶದ ಸುತ್ತಮುತ್ತ 2 ಕಿಲೋ ಮಿಟರ್ ರವರೆಗೆ ಯಾವುದೇ ಜನವಸತಿ ಪ್ರದೇಶ ಇಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೆ ಈಗ ಇರುವ ಅಮೋನಿಯಂ ನೈಟ್ರೇಟ್ ನ್ನು ಇ ಹರಾಜು ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಹರಾಜು ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಶೀಘ್ರದಲ್ಲೇ ದಾಸ್ತಾನಿರುವ ಅಮೋನಿಯಂ ನೈಟ್ರೇಟ್ ವಿಲೇವಾರಿಯಾಗಲಿದೆ ಎಂದು ತಿಳಿಸಿದ್ದಾರೆ.
2015 ರಲ್ಲಿ ಚೆನ್ನೈನ ಬಂದರಿನಲ್ಲಿ ಕೆಮಿಕಲ್ ಅನ್ನ ವಶಕ್ಕೆ ಪಡೆಯಲಾಗಿತ್ತು. ಅಂದಿನಿಂದ ಇದು ಅಲ್ಲಿಯೇ ಬಿದ್ದಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಮಾರು 36 ಕಂಟೈನರ್ ಅಷ್ಟು ಅಮೋನಿಯಂ ನೈಟ್ರೇಟ್ ಇದ್ದು, ಒಂದೊಂದು ಸುಮಾರು 20 ಟನ್ ಭಾರ ಹೊಂದಿವೆ. ‘ಸತ್ವ ಕಂಟೈನರ್ ಡಿಪಾರ್ಟ್ಮೆಂಟ್’ನಲ್ಲಿ ಸುಮಾರು 697 ಟನ್ ಅಮೋನಿಯಂ ನೈಟ್ರೇಟ್ ಇದೆ. ಅದನ್ನ ಶ್ರೀ ಅಮ್ಮನ್ ಕೆಮಿಕಲ್ಸ್ನಿಂದ ಆಮದು ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಅವುಗಳನ್ನ ಶೀಘ್ರದಲ್ಲಿಯೇ ವಿಲೇವಾರಿ ಮಾಡಲಿದ್ದೇವೆ ಅಂತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಅಂತಾ ವರದಿಯಾಗಿದೆ.
ಲೆಬನಾನ್ ಬೆರೂತ್ನಲ್ಲಿ ಸಂಭವಿಸಿದ ಸ್ಫೋಟಕದಲ್ಲಿ ಬರೋಬ್ಬರಿ 2,750 ಟನ್ನಷ್ಟು ಅಮೋನಿಯಂ ನೈಟ್ರೇಟ್ ಇತ್ತು. ಅಲ್ಲಿ ನಡೆದ ಸ್ಫೋಟದ ಭೀಕರತೆಯ ಅರಿತು ಎಚ್ಚೆತ್ತುಕೊಂಡಿರುವ ದೇಶದ ಸಿಬಿಐಟಿಸಿ (Central Board of Indirect Taxes & Customs), ಕಸ್ಟಮ್ಸ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮುನ್ನೆಚ್ಚರಿಕೆಯನ್ನ ನೀಡಿದೆ. ದೇಶದಲ್ಲಿ ಸಂಗ್ರಹಿಸಡಲಾಗಿರುವ ಸ್ಫೋಟಕ ವಸ್ತುಗಳು ಅನಾಹುತವನ್ನ ಸಂಭವಿಸಬಹುದಾಗಿದ್ದು, ಈ ಬಗ್ಗೆ ಕೂಡಲೇ ತುರ್ತು ಕ್ರಮಕೈಗೊಳ್ಳಿ ಎಚ್ಚರಿಕೆಯನ್ನ ನೀಡಿದೆ.