LATEST NEWS
ನಕ್ಸಲ್ ಚಟುವಟಿಕೆ ಹೆಚ್ಚಾಗಲು ಕಾಂಗ್ರೇಸ್ ಕಾರಣ – ಶಾಸಕ ಸುನಿಲ್ ಕುಮಾರ್

ಮಂಗಳೂರು ಎಪ್ರಿಲ್ 8: ರಾಜ್ಯದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಹೆಚ್ಚಾಗಲು ಕಾಂಗ್ರೇಸ್ ಸರಕಾರದ ಮೃದುಧೋರಣೆಯೇ ಕಾರಣ ಎಂದು ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಕಾಂಗ್ರೇಸ್ ಸರಕಾರ ಬಂದ ನಂತರ ನಕ್ಸಲ್ ಚಟುವಟಿಕೆ ಹೆಚ್ಚಾಗಿದ್ದು, ರಾಜ್ಯದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಹೆಚ್ಚಾಗಲು ರಾಜ್ಯ ಸರಕಾರದ ಮೃದು ಧೋರಣೆಯೆ ಕಾರಣವಾಗಿದೆ ಎಂದು ಆರೋಪಿಸಿದರು. ವಿರೋಧಿ ಶಕ್ತಿಗಳನ್ನು ಗಟ್ಟಿಯಾಗಿ ಸದೆ ಬಡಿಯಬೇಕಾಗಿದ್ದ ಸರಕಾರ ಸುಮ್ಮನೆ ಇದ್ದು, ಇದೀಗ ನಕ್ಸಲ್ ಚಟುವಟಿಕೆ ಹೆಚ್ಚಾಗಿದೆ ಎಂದರು ಇದು ಸಮಾಜ ಭದ್ರತೆ ದೃಷ್ಠಿಯಿಂದ ಅಪಾಯದ ಸಂಗತಿ. ಕೂಡಲೇ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಲೆನಾಡಿನ ಭಾಗದಲ್ಲಿ ನಕ್ಸಲ್ ಓಡಾಟ ಭಯದ ವಾತಾವರಣ ನಿರ್ಮಾಣ ಮಾಡಿದೆ. ಆದರೆ ಗೃಹ ಸಚಿವರು ಉಸ್ತುವಾರಿ ಸಚಿವರು ಮಾತ್ರ ಈ ಕಡೆ ಗಮನ ಹರಿಸದೇ ಇದ್ದಾರೆ ಎಂದು ಆರೋಪಿಸಿದರು.
