Connect with us

BELTHANGADI

ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಬೆಳ್ತಂಗಡಿ ನಡ ಸರಕಾರಿ ಶಾಲೆ ಶಿಕ್ಷಕ ಯಾಕೂಬ್‌‌‌ ಎಸ್‌

ಬೆಳ್ತಂಗಡಿ ಅಗಸ್ಟ್ 22: ಕರಾವಳಿಯ ಶೈಕ್ಷಣಿಕ ಹಿರಿಮೆಗೆ ಮತ್ತೊಂದು ಗರಿ ಬಂದಿದ್ದು, ಬೆಳ್ತಂಗಡಿಯ ನಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಯಾಕೂಬ್‌‌‌ ಎಸ್‌ ಅವರಿಗೆ ಕೇಂದ್ರ ಶಿಕ್ಷಣ ಸಚಿವಾಲಯವು ನೀಡುವ ರಾಷ್ಟ್ರೀಯ ಶಿಕ್ಷಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಗೆ ದೇಶಾದ್ಯಂತ ಒಟ್ಟು 47 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.


ಯಾಕುಬ್ ಅವರು ಶಿಕ್ಷಕರಾಗಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗಣಿತವನ್ನು ಸುಲಭವಾಗಿ ಕಲಿಯುವ ನಿಟ್ಟಿನಲ್ಲಿ ಸ್ಥಳೀಯರ ಸಹಾಯದಿಂದ ಗಣಿತ ಪ್ರಯೋಗಾಲಯವನ್ನು ಪ್ರಾರಂಭಿಸಿದ್ದು, ಶಿಕ್ಷಣ ಇಲಾಖೆಯ ಗಮನ ಸೆಳೆದಿದ್ದರು. ಯಾಕೂಬ್‌ ಅವರು ಮಾಡಿರುವ ಈ ಕಾರ್ಯ ರಾಜ್ಯಾದ್ಯಂತ ಗಮನ ಸೆಳೆದಿದ್ದು, ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನೂ ನೀಡಲಾಯಿತು.

ಯಾಕೂಬ್ ಅವರು ಕೊಯ್ಯೂರು ಉನ್ನಲು ನಿವಾಸಿಗಳಾದ ಇಸುಬು ಬ್ಯಾರಿ ಮತ್ತು ಅಲಿಮ್ಮಮ್ಮ ದಂಪತಿಯ ಪುತ್ರ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಊರಿನ ಶಾಲೆಯಲ್ಲಿ ಪೂರೈಸಿದರು. ನಂತರ ಇವರು ಮಂಗಳೂರಿನ ಸರ್ಕಾರಿ ಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದರು ಹಾಗೂ ನಡಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು 2007 ರಿಂದ 2012 ರವರೆಗೆ ಅಕ್ಷರಾ ದಾಸೋಹಾ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
1996 ರಲ್ಲಿ ಯಾಕೂಬ್‌ ಅವರು ತಮ್ಮ ಬೋಧನಾ ವೃತ್ತಿಯನ್ನು ಪ್ರಾರಂಭಿಸಿದರು. ಅಂದಿನಿಂದ ಅವರು ಬೋಧಿಸುತ್ತಿರುವ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಯಾಕೂಬ್‌‌ ಅವರು ಮಾಡಿದ ಸರಳ ಗಣಿತ ಬೋಧನೆಯ 300 ಕ್ಕೂ ಹೆಚ್ಚು ವೀಡಿಯೊಗಳು ಯೂಟ್ಯೂಬ್‌ನಲ್ಲಿ ಲಭ್ಯವಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *