LATEST NEWS
ಮೋದಿ ಜಯಕಾರಕ್ಕೆ ಕಂಗೆಟ್ಟ ಮೊಯಿದ್ದಿನ್ ಬಾವಾ

ಮೋದಿ ಜಯಕಾರಕ್ಕೆ ಕಂಗೆಟ್ಟ ಮೊಯಿದ್ದಿನ್ ಬಾವಾ
ಮಂಗಳೂರು ಎಪ್ರಿಲ್ 23: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮೊಯಿದ್ದಿನ್ ಬಾವಾ ಮೋದಿ ಅವರಿಂದ ಕಂಗೆಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಇಂದು ಮುಂಜಾನೆ ಮೊಯಿದ್ದಿನ್ ಬಾವಾ ದೇವಾಲಯ, ದೇವಸ್ಥಾನ, ದರ್ಗಾ, ಚರ್ಚಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಮಪತ್ರ ಸಲ್ಲಿಸಲು ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ್ದರು. ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದಂತೆ ಬಾವಾ ಅವರಿಗೆ ಬಿಜೆಪಿಗರು ಮೋದಿ ಅವರ ಸ್ವಾಗತ ನೀಡಿದರು.

ಪಾಲಿಕೆ ಎದುರು ಸೇರಿದ್ದ ಬಿಜೆಪಿ ಕಾರ್ಯಕರ್ತರು ಬಾವಾ ಅವರನ್ನು ಕಂಡೊಡನೆ ಮೋದಿ ಜಯಕಾರ ಆರಂಭಿಸಿದರು. ಈ ಹಿನ್ನಲೆಯಲ್ಲಿ ಕಸಿವಿಸಿ ಅನುಭವಿಸಿದ ಬಾವಾ ಅಲ್ಲಿಂದ ತೆರಳಲು ಯತ್ನಿಸಿದರು ಸಾಧ್ಯವಾಗಲಿಲ್ಲ. ಬಿಜೆಪಿ ಕಾರ್ಯಕರ್ತರ ಮೋದಿ ಜಯಕಾರದ ನಡುವೆ ನುಸುಳಿ ಬಂದ ಬಾವಾ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಅಲ್ಲಿಂದ ತೆರಳಿದರು. ಮೋದಿ ಜಯಕಾರದಿಂದ ಕಂಗೆಟ್ಟ ಕಾಂಗ್ರೇಸ್ ಕಾರ್ಯಕರ್ತರು ಯಾವುದೇ ಪ್ರತಿರೋಧ ತೋರದೆ ಅಲ್ಲಿಂದ ತೆರಳಿದರು.