LATEST NEWS
ನಂತೂರು, ಕೆಪಿಟಿ ಫ್ಲೈ ಓವರ್ ಕೆಲಸ ಸದ್ಯದಲ್ಲೇ ಆರಂಭ,ಮಂಗಳೂರು ಸ್ಮಾರ್ಟ್ ಸಿಟಿ ರೌಂಡ್ಸ್ ಹಾಕಿದ MP ಕಟೀಲ್..!
ಮಂಗಳೂರು ಸ್ವಾರ್ಟ್ ಸಿಟಿ ಯೋಜನೆ 2024 ಮಾರ್ಚ್ ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಸ್ಮಾರ್ಟ್ ಸಿಟಿ ಯೋಜನೆಗೆ ಒಟ್ಟು 1,000 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರು : ಮಂಗಳೂರು ಸ್ವಾರ್ಟ್ ಸಿಟಿ ಯೋಜನೆ 2024 ಮಾರ್ಚ್ ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಸ್ಮಾರ್ಟ್ ಸಿಟಿ ಯೋಜನೆಗೆ ಒಟ್ಟು 1,000 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸ್ಥಳೀಯ ಶಾಸಕ, ಮೇಯರ್, ಅಧಿಕಾರಿಗಳು ಮತ್ತಿತರ ಜನಪ್ರತಿನಿಧಿಗಳೊಂದಿಗೆ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ನಡೆಸಿದ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಂದು ಸಾವಿರ ಕೋಟಿ ಅನುದಾನದಲ್ಲಿ 745 ಕೋಟಿ ರೂ, ಗಳ ಕಾಮಗಾರಿ ಈಗಾಗಲೇ ಮುಗಿದಿದೆ.
55 ಕಾಮಗಾರಿಗಳು ಪೂರ್ಣಗೊಂಡಿದ್ದು, 33 ಕಾಮಗಾರಿಗಳು ಪ್ರಗತಿಯಲ್ಲಿದೆ.
ಇದರಲ್ಲಿ ನಾಲ್ಕು ಕಾಮಗಾರಿಗಳು PPP ಮಾದರಿಯಲ್ಲಿ ನಡೆಯುತ್ತಿದೆ. ಬಹು ಸಮಯದ ಐದು ರೈಲ್ವೇ ಗೇಟ್ ಗಳ ಬಳಿ ಹೊಸ ಸೇತುವೆಗಳ ನಿರ್ಮಾಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದಾಗ ಮನೆ ಮನೆಗೆ ಗ್ಯಾಸ್,ನೀರು, ಹೈಸ್ಪೀಡ್ ಇಂಟರ್ನೆಟ್ ಗಳ ಮೂರು ಭರವಸೆ ನೀಡಿದ್ದರು.
ಈಗಾಗಲೇ 2 ಲಕ್ಷ ಮನೆಗಳಿಗೆ ಗ್ಯಾಸ್ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ.
ನಗರದಲ್ಲಿ ಸುಮಾರು 792 ಕೋಟಿ ವೆಚ್ಚದಲ್ಲಿ ಜಲಸಿರಿ ಯೋಜನೆ ಜಾರಿಯಲ್ಲಿದೆ.
ಹೈಸ್ಪೀಡ್ ಇಂಟರ್ನೆಟ್ ಕೇಬಲ್ ಅಳವಡಿಕೆ ಕಾರ್ಯ ಬಿಎಸ್ಎನ್ಎಲ್ ಮೂಲಕ ನಡೆಯುತ್ತಿದೆ.
ಇದರ ಜೊತೆಗೆ ದಶಕಗಳಿಂದ ನೆನೆಗುದಿಗೆ ಬಿದ್ದ ನಗರದ ಮುಖ್ಯ ಬೇಡಿಕೆಗಳಲ್ಲಿ ಒಂದಾದ ನಂತೂರು ಮತ್ತು ಕೆಪಿಟಿ ಫ್ಲೈ ಓವರ್ ಕಾಮಗಾರಿ ಸದ್ಯದಲ್ಲೇ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.