Connect with us

  FILM

  ಯಾರು ಮಾತದಾನ ಮಾಡುವುದಿಲ್ಲವೋ ಅವರು ನಿಜವಾದ ದೇಶದ್ರೋಹಿಗಳು – ನಾನಾ ಪಾಟೇಕರ್

  ಮಂಗಳೂರು ಮಾರ್ಚ್ 21: ನಿರ್ದಿಗಂತದ ವತಿಯಿಂದ ಅಸ್ತಿತ್ವದ ಸಹಯೋಗದಲ್ಲಿ ಆರು ದಿನಗಳ ಕಾಲ ನಡೆಯುವ ‘ನೇಹದಿ ನೇಯ್ಗೆ’ ನಿರ್ದಿಗಂತ ರಂಗೋತ್ಸವ ಕಾರ್ಯಕ್ರಮ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿ ಪ್ರಾರಂಭಗೊಂಡಿದೆ.


  ಕಾರ್ಯಕ್ರಮಕ್ಕೆ ಖ್ಯಾತ ಹಿಂದಿ ಚಲನಚಿತ್ರ ನಟ ನಾನಾ ಪಾಟೇಕರ್ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ವೇಳೆ ಮಾತನಾಡಿದ ನಾನಾ ಪಾಟೇಕರ್ ನಮ್ಮ ಮತದಾನ ನಮ್ಮ ಅಸ್ತಿತ್ವ. ಐದು ವರ್ಷಗಳಿಗೊಮ್ಮೆ ಸಿಗುವ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ಯಾರು ಈ ಅವಕಾಶವನ್ನು ಬಳಸಿಕೊಳ್ಳುವುದಿಲ್ಲವೋ, ಯಾರು ಮಾತದಾನ ಮಾಡುವುದಿಲ್ಲವೋ ಅವರು ನಿಜವಾದ ದೇಶದ್ರೋಹಿಗಳು” ಎಂದು ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್‌ ಹೇಳಿದ್ದಾರೆ.
  ಸಮಾಜದಲ್ಲಿ ಅಶಾಂತಿಯ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಲು ಕಲಾವಿದನಿಗೆ ರಂಗಭೂಮಿಯೇ ಅತ್ಯುತ್ತಮ ಮಾರ್ಗ. ಈ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸವಾಗಲಿ ಎಂದರು.


  ಈ ವೇಳೆ ಕೆ.ಪಿ ಲಕ್ಷ್ಮಣ ನಿರ್ದೇಶನದ, ಬೆಂಗಳೂರು ಜಂಗಮ ಕಲೆಕ್ಟಿವ್ ಪ್ರಸ್ತುತಿಯ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಖ್ಯಾತ ಚಿತ್ರ ನಟ ಪ್ರಕಾಶ್ ರಾಜ್, ಸೈಂಟ್ ಅಲೋಶಿಯಸ್ ಪ್ರಾಂಶುಪಾಲರಾದ ಫಾ. ಡಾ. ಪ್ರವೀಣ್ ಮಾರ್ಟಿಸ್ ಎಸ್ ಜೆ ಮತ್ತಿತರರು ಉಪಸ್ಥಿತರಿದ್ದರು….

  Share Information
  Advertisement
  Click to comment

  You must be logged in to post a comment Login

  Leave a Reply