Connect with us

FILM

ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಎಂದವನ ಚಳಿ ಬಿಡಿಸಿದ ನಮ್ರತಾ

ಬೆಂಗಳೂರು, ಮೇ 14: ಬಿಗ್ ಬಾಸ್ ಕನ್ನಡ 10’ರ ಸ್ಪರ್ಧಿ ನಮ್ರತಾ ಗೌಡ ಕಿಡಿಗೇಡಿ ಕಿರುಕುಳದ ವಿರುದ್ಧ ತಿರುಗಿಬಿದ್ದಿದ್ದಾರೆ. ರಾಜಕಾರಣಿಗಳೊಂದಿಗೆ ಡೇಟಿಂಗ್ ಮಾಡುವಂತೆ ಹಿಂದೆ ಬಿದ್ದವನ ಬಂಡವಾಳವನ್ನು ನಟಿ ಬಯಲು ಮಾಡಿದ್ದಾರೆ. ಸಾಕ್ಷಿ ಸಮೇತ ಸ್ಕ್ರೀನ್ ಶಾಟ್ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ನಮ್ರತಾ ಶೇರ್ ಮಾಡಿದ್ದಾರೆ.

ರೋಷನ್ ಎಂಬಾತ, ರಾಕಿ ಜಿ43 ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ಕೆಟ್ಟ ಸಂದೇಶಗಳನ್ನು ಕಳಿಸಿದ್ದಾನೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿ ತಿರುಗೇಟು ನೀಡಿದ್ದಾರೆ. ಕಿಡಿಗೇಡಿ ರೋಷನ್, ತಮಗೆ ಸಾಕಷ್ಟು ರಾಜಕಾರಣಿಗಳ ಜೊತೆಗೆ ನಂಟಿದೆ. ರಾಜಕಾರಣಿಗಳ ಜೊತೆಗೆ ಡೇಟಿಂಗ್ ಮಾಡುವಂತೆ ರೋಷನ್ ನಮ್ರತಾರನ್ನು ಕೇಳಿದ್ದಾನೆ. ನಾನು ವಿಐಪಿಗಳ ಅಡಿಯಲ್ಲಿ ಕೆಲಸ ಮಾಡುತ್ತೇನೆ. ನಿಮ್ಮ ಫೋನ್ ನಂಬರ್, ಫೋಟೋಗಳನ್ನು ಕಳುಹಿಸುವ ಅಗತ್ಯವಿಲ್ಲ. ಡೇಟಿಂಗ್‌ಗೆ ಬುಕ್ ಮಾಡ್ತೀನಿ, ಹೆಚ್ಚಿನ ಹಣ ಕೇಳಿದರು ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾನೆ. 200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾರಿಗೂ ಗೊತ್ತಾಗುವುದಿಲ್ಲ. ಸೇಫ್ ಆಗಿರುತ್ತದೆ ಎಂದು 4 ಬಾರಿ ಸಂದೇಶವನ್ನು ನಟಿಗೆ ಕಳುಹಿಸಿದ್ದಾರೆ.

ಇದು ನಮ್ರತಾಗೆ ಬೇಸರ ಮೂಡಿಸಿದೆ. ತಕ್ಕ ಪಾಠ ಕಲಿಸಬೇಕೆಂದೇ ಕಿಡಿಗೇಡಿ ರೋಷನ್ ಮಾಡಿದ ಸಂದೇಶವನ್ನು ಇನ್ಸಾ÷್ಟಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಹೀಗೆಲ್ಲಾ ಮೆಸೇಜ್ ಮಾಡೋದು ನಿಲ್ಲಬೇಕು ಎಂದು ನಮ್ರತಾ ಧ್ವನಿಯೆತ್ತಿದ್ದಾರೆ. ನಟಿಯ ಈ ನಡೆಗೆ ಫ್ಯಾನ್ಸ್ ಬೆಂಬಲ ಸೂಚಿಸಿದ್ದಾರೆ.

ನಮ್ರತಾ ಗೌಡ ಸದ್ಯ `ಕರ್ಣ’ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಯಕ ಕಿರಣ್ ರಾಜ್, ಭವ್ಯಾ ಗೌಡ ಜೊತೆ ಕಾಣಿಸಿಕೊಂಡಿದ್ದಾರೆ. ಶ್ರುತಿ ನಾಯ್ಡು ಸೀರಿಯಲ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.

Share Information
Continue Reading
Advertisement
2 Comments

2 Comments

    Leave a Reply

    Your email address will not be published. Required fields are marked *