Connect with us

    BANTWAL

    ಬಂಟ್ವಾಳ – ಅಂಗಡಿ ಶಟರ್ ಮೇಲೆ name Jihad ಎಂದು ಬರೆದ ಕಿಡಿಗೇಡಿಗಳು…!!

    ಬಂಟ್ವಾಳ ಅಕ್ಟೋಬರ್ 13: ಅಂಗಡಿಯೊಂದರ ಶಟರ್ ನಲ್ಲಿ ಕಿಡಿಗೇಡಿಗಳು ‘Name jihad’ ಎಂದು ಬರೆದ ಘಟನೆ ವಿಟ್ಲ ಪೇಟೆಯಲ್ಲಿ ನಡೆದಿದೆ.


    ವಿಟ್ಲಪೇಟೆಯಲ್ಲಿರುವ ದೀಪಕ್ ವಾಚ್ ವರ್ಕ್ಸ್ ಅಂಗಡಿಯ ಶಟರ್ ಮೇಲೆ ಕಿಡಿಗೇಡಿಗಳು name Jihad ಎಂದು ಬರೆದಿದ್ದಾರೆ, ಅಕ್ಟೊಬರ್ 11ರಂದು ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಅಕ್ಟೊಬರ್ 12ರಂದು ಅಂಗಡಿ ಮಾಲಕರು ಬಾಗಿಲು ತೆಗೆಯಲು ಬಂದು ನೋಡಿದಾಗ ಬರೆದಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಂಗಡಿ ಮಾಲಕ ಅಬ್ದುಲ್ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಇಬ್ಬರು ಬರುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply