KARNATAKA
ಪ್ರಯಾಣಿಕರು ಇರುವ ವೇಳೆಯೆ ಬಸ್ ನಿಲ್ಲಿಸಿ ನಮಾಜ್: ಚಾಲಕನ ವಿರುದ್ಧ ತನಿಖೆಗೆ ಆದೇಶ

ಹಾವೇರಿ ಎಪ್ರಿಲ್ 30: ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ವೇಳೆ ರಸ್ತೆ ಬದಿ ಬಸ್ ನಿಲ್ಲಿಸಿ ಬಸ್ಸಿನೊಳಗೆ ಚಾಲಕ ನಮಾಜ್ ಮಾಡಿದ ಘಟನೆ ನಡೆದಿದ್ದು, ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾನಗಲ್ಲನಿಂದ ವಿಶಾಲಗಡ್ ಗೆ ತೆರಳುತ್ತಿದ್ದ ಬಸ್ ನಲ್ಲಿ ಹುಬ್ಬಳ್ಳಿ ಮತ್ತು ಹಾವೇರಿ ಮಾರ್ಗ ಮಧ್ಯದಲ್ಲಿ ಬಸ್ ನಿಲ್ಲಿಸಿ ಮಂಗಳವಾರ ಸಂಜೆ ಡ್ರೈವರ್ ಕಂ ಕಂಡಕ್ಟರ್ ಎ.ಆರ್. ಮುಲ್ಲಾ ಎಂಬುವವರು ನಮಾಜ್ ಮಾಡಿದ್ದಾರೆ.ಪ್ರಯಾಣಿಕರು ನಮಾಜ್ ಮಾಡುವ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.ಕರ್ತವ್ಯದ ಅವಧಿಯಲ್ಲಿಯೇ ಡ್ರೈವರ್ ಕಂ ಕಂಡಕ್ಟರ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಹಾವೇರಿಯಲ್ಲಿ ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಡ್ರೈವರ್ ಕಂ ಕಂಡಕ್ಟರ್ ನಮಾಜ್ ಮಾಡಿದ ವೀಡಿಯೋ ವೈರಲ್ ಆದ ಬೆನ್ನಲ್ಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಪತ್ರ ಬರೆದ ರಾಮಲಿಂಗಾ ರೆಡ್ಡಿ, ಸೂಕ್ತ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.
KSRTC driver Shafiulla Nadaf stopped a government bus mid-route from Hubballi to Haveri to offer Namaz on the roadside with passengers still inside
This happened on the evening of April 29. Is this public transport or his private property @KSRTC_Journeys ?
Imagine the… pic.twitter.com/4lx3qFvfCE
— Akshay Akki ಅಕ್ಷಯ್ (@FollowAkshay1) April 30, 2025