DAKSHINA KANNADA
ರಮನಾಥ ರೈ, ಯು.ಟಿ.ಖಾದರ್ ಬಿಟ್ಟು ಎಲ್ಲರನ್ನೂ ಬಿಜೆಪಿಗೆ ಕರೆತನ್ನಿ ಎಂದ ನಳಿನ್..ಕಾರ್ಯಕರ್ತರಿಂದ ವಿರೋಧ

ಪುತ್ತೂರು ಡಿಸೆಂಬರ್ 06: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್ ಮುಖಂಡರಾದ ರಮಾನಾಥ ರೈ, ಯು.ಟಿ ಖಾದರ್ ಬಿಟ್ಟು ಉಳಿದ ಕಾಂಗ್ರೇಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕರೆ ನೀಡಿದ್ದಾರೆ. ಆದರೆ ಈ ಹೇಳಿಕೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರೇ ಕಪ್ಪು ಪಟ್ಟಿ ಪ್ರದರ್ಶಿಸಿದ ವಿರೋಧಿಸಿದ ಘಟನೆ ಕಬಕದಲ್ಲಿ ನಡೆದಿದೆ.
ಪುತ್ತೂರಿನ ಕಬಕದಲ್ಲಿ ನಡೆದ ವಿಧಾನಪರಿಷತ್ ಚುನಾವಣಾ ಸಭೆಯಲ್ಲಿ ಮಾತನಾಡಿದ ನಳಿನ್ ಕಾಂಗ್ರೆಸ್ ಮುಖಂಡರನ್ನು ಬಿಟ್ಟು ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿ, ಜಿಲ್ಲೆಯನ್ನು ಕಾಂಗ್ರೇಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಿ ಎಂದು ಕಾರ್ಯಕರ್ತರಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದರು. ರಾಜ್ಯದಲ್ಲಿ ಕಾಂಗ್ರೇಸ್ ಸದ್ಯದಲ್ಲೇ ನಶಿಸಿ ಹೋಗಲಿದ್ದು, ಕಾಂಗ್ರೇಸ್ ಗೆ ಮೂರು ಶಾಪ ತಟ್ಟಿದೆ. ಮಹಾತ್ಮಾ ಗಾಂಧಿ ಶಾಪ, ಡಾ.ಬಿ.ಆರ್.ಅಂಬೇಡ್ಕರ್ ಶಾಪ ಮತ್ತು ಗೋವಿನ ಶಾಪವಿದೆ. ಬಿಜೆಪಿ ತತ್ವ ಸಿದ್ಧಾಂತ ಒಪ್ಪುವ ಎಲ್ಲರಿಗೂ ಬಿಜೆಪಿಗೆ ಸ್ವಾಗತ ಎಂದರು.

ನಳಿನ್ ಭಾಷಣದ ಬಳಿಕ ಕಾಂಗ್ರೆಸ್ ಪಕ್ಷದ ಹಲವು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಆದರೆ ಕಾಂಗ್ರೆಸ್ ಮುಖಂಡರ ಸೇರ್ಪಡೆಗೆ ಬಿಜೆಪಿ ಕಾರ್ಯಕರ್ತರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ರಾಜ್ಯಾದ್ಯಕ್ಷರ ಮುಂದೆಯೇ ಕಪ್ಪು ಪಟ್ಟಿ ಪ್ರದರ್ಶಿಸಿದರು. ಕಾರ್ಯಕರ್ತರ ವಿರೋಧದಿಂದ ಬಿಜೆಪಿ ಮುಖಂಡರು ಮುಜುಗರಕ್ಕೊಳಗಾಗಬೇಕಾಯಿತು.