DAKSHINA KANNADA
ನಳೀನ್ ಅವ್ರ ಕಾರನ್ನ ಅಲುಗಾಡಿಸಬಾರ್ದಿತ್ತು, ನಳೀನ್ ಅವ್ರನ್ನೇ ಅಲುಗಾಡಿಸಬೇಕಿತ್ತು: ಪುನೀತ್ ಸುವರ್ಣ

ಪುತ್ತೂರು, ಮೇ 23: ಬಿಜೆಪಿ ವಿರುದ್ಧ ಹಿಂದೂ ಮಹಾಸಭಾ ಕೆಂಡಾಮಂಡಲವಾಗಿದ್ದು, ದಿ.ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸಹಾಯಹಸ್ತ ಮಾಡಿದ್ದು ಹಿಂದೂ ಸಂಘಟನೆ ಕಾರ್ಯಕರ್ತರು, ನೆನಪಿಟ್ಟುಕೊಳ್ಳಿ ಬಿಜೆಪಿಯವರು ಸಹಾಯ ಮಾಡಿಲ್ಲ ಎಂದು ಹಿಂದೂ ಮಹಾಸಭಾದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪುನೀತ್ ಸುವರ್ಣ ಹೇಳಿದ್ದಾರೆ.
ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಪುನೀತ್ ಸುವರ್ಣ ನೆಟ್ಟಾರ್ ಕುಟುಂಬಕ್ಕೆ ನಳಿನ್ ಕುಮಾರ್ ಕಟೀಲ್ ಮನೆಕಟ್ಟಿಕೊಟ್ರು ಅಂತ ಹೇಳ್ತಾರೆ, ನಳೀನ್ ಅವ್ರ ಕಾರು ಅಲುಗಾಡಿಸಿದ್ದಕ್ಕೆ ಮನೆ ಕಟ್ಟಿಕೊಟ್ರು, ನಿಜವಾಗಿ ನಳೀನ್ ಅವ್ರ ಕಾರನ್ನ ಅಲುಗಾಡಿಸಬಾರ್ದಿತ್ತು, ನಳೀನ್ ಅವ್ರನ್ನೇ ಅಲುಗಾಡಿಸಬೇಕಿತ್ತು.

ನಾವು ಹಿಂದೂ ಮಹಾಸಭಾದವ್ರು ಅಲ್ಲಿ ಇರ್ತಿದ್ರೆ ನಳೀನ್ ಅವ್ರನ್ನೇ ಅಲುಗಾಡಿಸ್ತಿದ್ವಿ, ಹಿಂದೂ ಮಹಾಸಭಾ ತತ್ವ ಸಿದ್ಧಾಂತವನ್ನ ಅನುಸರಿಸಿಕೊಂಡು ಬರುವವರು, ನಮ್ಮ ತತ್ವ ಸಿದ್ಧಾಂತ ವೀರ ಸಾವರ್ಕರ್, ನಾಥೂರಾಂ ಗೋಡ್ಸೆ ಅವರದ್ದು, ನಾನು ಎದೆತಟ್ಟಿ ಹೇಳ್ತೆನೆ ನಾನು ಗಾಂಧಿವಾದಿ ಅಲ್ಲ, ಗೋಡ್ಸೆವಾದಿ, ಅಖಂಡ ಭಾರತದ ಹಿಂದೂ ರಾಷ್ಟ್ರದ ಮುನ್ನುಡಿ ಬರೆದವ್ರು ಗೋಡ್ಸೆ ಎಂದು ಹಿಂದೂ ಮಹಾಸಭಾದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪುನೀತ್ ಸುವರ್ಣ ಹೇಳಿದ್ದಾರೆ.