LATEST NEWS
ಅಯೋಧ್ಯೆಯ ರಾಮಮಂದಿರ ಸುತ್ತ ಇರಲಿದೆ ಮಂಗಳೂರು ನಿಡ್ದೋಡಿಯ ‘ನಾಗಲಿಂಗ’ ಗಿಡ..!
ಮುಲ್ಕಿ, ಸೆಪ್ಟೆಂಬರ್ 23: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮೆರಗುನ್ನು ಹೆಚ್ಚಿಸಲು ನಿಡ್ದೋಡಿಯಿಂದ ನಾಗಲಿಂಗ ಗಿಡವನ್ನು ಕಳುಹಿಸಿಕೊಡಲಾಗಿದೆ. ಕೊರಿಯರ್ ಮೂಲಕ ಗಿಡಗಳನ್ನು ಕಳುಹಿಸಿಕೊಡಲಾಗಿದ್ದು, ಗಿಡಗಳು ಅಯೋಧ್ಯೆ ರಾಮಮಂದಿರ ಆಡಳಿತ ಮಂಡಳಿಗೆ ತಲುಪಿದ್ದು, ಅಧಿಕಾರಿಗಳು ದೂರವಾಣಿ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಾಗಲಿಂಗ ಗಿಡವನ್ನು ನೂತನ ರಾಮಮಂದಿರ ಬದಿಯಲ್ಲಿ ನೆಡುವುದಾಗಿ ತಿಳಿಸಿದ್ದಾರೆ.
ನಾಗಲಿಂಗ ವೃಕ್ಷ ಎಂದರೆ ನಾಗಲಿಂಗಾಕಾರದ ಹೂ ಬಿಡುವ ವಿಶಿಷ್ಟ ವೃಕ್ಷ ದೊಡ್ಡ ಮರವಾಗಿ ಬೆಳೆಯುವ ಈ ಗಿಡವನ್ನು ಬೆಳೆಸಿ ಉಚಿತವಾಗಿ ಹಂಚುವವರು ನಿಡ್ದೋಡಿಯ ವಿನೇಶ್ ಪೂಜಾರಿ. ಗೂಗಲ್ ಮೂಲಕ ಅಯೋಧ್ಯೆಯ ಬಗ್ಗೆ ವಿವರ ಪಡೆದು ಅಲ್ಲಿನ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಪಡೆದು, ಕರೆ ಮಾಡಿ ನಾಗಲಿಂಗ ವೃಕ್ಷದ ಬಗ್ಗೆ ವಿವರ ನೀಡಿದ್ದರು, ಮಾಹಿತಿ ಪಡೆದ ಅಧಿಕಾರಿಗಳು ಅಯೋಧ್ಯೆಯಲ್ಲಿ ಈ ಹೂವಿನ ಗಿಡವನ್ನು ನೆಡುವ ಸಲುವಾಗಿ ಕಳುಹಿಸಿಕೊಡುವಂತೆ ವಿನಂತಿಸಿದರು. ಅದರಂತೆ ವಿನೇಶ್ ಪೂಜಾರಿಯರು ಕೋರಿಯಾರ್ ಮೂಲಕ ನಾಗಲಿಂಗ ವೃಕ್ಷದ 5 ಗಿಡಗಳನ್ನು ಕಳುಹಿಸಿಕೊಟ್ಟರು ಕೆಲ ದಿನಗಳಲ್ಲಿಯೇ ಅಯೋಧ್ಯೆಯ ಅಧಿಕಾರಿಗಳಿಂದ ವಿನೇಶ್ ಅವರಿಗೆ ಕರೆ ಬಂದಿದ್ದು ಗಿಡ ಸಿಕ್ಕಿದ ಬಗ್ಗೆ ಮಾಹಿತಿ ನೀಡಿ, ಇದನ್ನು ಇಲ್ಲಿ ನೆಟ್ಟು, ಗಿಡ ನೆಟ್ಟ ಪೊಟೊವನ್ನು ಕಳುಹಿಸಿಕೊಡುವುದಾಗಿ ಹೇಳಿದರು.
ನಾಗಲಿಂಗ ಪುಷ್ಪ ಮೂಲತಃ ದಕ್ಷಿಣ ಅಮೇರಿಕದ್ದು ಅತ್ಯಂತ ವಿರಳವಾಗಿ ಕಾಣಸಿಗುವ, ಶಿವಪೂಜೆಗೆ ಪವಿತ್ರ ಎಂದು ನಂಬಲ್ಪಡುವ, ನಾಗಲಿಂಗ ಪುಷ್ಪವನ್ನು ಮಲ್ಲಿಕಾರ್ಜುನ ಪುಷ್ಪ ಶಿವಲಿಂಗ ಪುಷ್ಪ ಎಂದೆಲ್ಲ ಕರೆಯುತ್ತಾರೆ. ಮಂಗಳೂರಿನ ಒಂದು ಕಡೆ ಈ ಮರ ವನ್ನು ಕಂಡ ವಿನೀಶ್ ಪೂಜಾರಿ, ಇದರ ಕಾಯಿಗಳನ್ನು ತಂದು ಬೀಜದ ಮೊಳಕೆ ಬರಿಸಿ ಅಗತ್ಯವಿದ್ದವರಿಗೆ ಉಚಿತವಾಗಿ ಹಂಚುವ ಕೆಲಸ ಶುರು ಮಾಡಿದರು, ನೂರಾರು ದೇವಸ್ಥಾನ ದೈವಸ್ಥಾನ ಮತ್ತಿತರ ಕಡೆಗಳಿಗೆ ವಿತರಿಸಿದ ವಿನೇಶ್ ಇದುವರೆಗೆ ಸುಮಾರು 3000 ಕ್ಕಿಂತಲೂ ಅಧಿಕ ಗಿಡಗಳನ್ನು ವಿತರಿಸಿದ್ದಾರೆ. ವೃತ್ತಿ ಯಲ್ಲಿ ಎಲೆಕ್ಟಿಕಲ್ ಕೆಲಸವನ್ನು ನಿರ್ವಹಿಸುವ ವಿನೇಶ್ ಅವರ ವಿತರಣೆಯ ಕಾರ್ಯ ಈಗಲೂ ಮುಂದುವರಿದೆ.