FILM
ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಗೆ ರಾಯಭಾರಿಯಾಗಿ ನಟಿ ತಮನ್ನಾ

ಬೆಂಗಳೂರು ಮೇ 22: ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ನೇಮಕಗೊಂಡಿದ್ದಾರೆ. ತಮನ್ನಾಗೆ ಬರೋಬ್ಬರಿ 6.20 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುತ್ತೋಲೆ ವೈರಲ್ ಆಗಿದೆ.
ಕರ್ನಾಟಕದ ಸರ್ಕಾರದ ಒಡೆತನದಲ್ಲಿರುವ ಮೈಸೂರು ಸ್ಯಾಂಡಲ್ ಸೋಪ್ಗೆ ಹೊಸ ರಾಯಭಾರಿ ನೇಮಕ ಆಗಿದೆ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಈ ಬ್ರ್ಯಾಂಡ್ಗೆ ಪ್ರಚಾರ ರಾಯಭಾರಿ ಆಗಿರೋದು ವಿಶೇಷ. ಇದಕ್ಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ತಮನ್ನಾ ಬದಲು ಕನ್ನಡದವರನ್ನೇ ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಅವರ ಸಂಭಾವನೆ ವಿಚಾರವೂ ಅನೇಕ ಹುಬ್ಬೇರುವಂತೆ ಮಾಡಿದೆ.

ಈಗಾಗಲೇ ಅನೇಕ ಬ್ಯೂಟಿ ಬ್ರ್ಯಾಂಡ್ಗಳು ತಮನ್ನಾ ಭಾಟಿಯಾ ಜೊತೆ ಒಪ್ಪಂದ ಮಾಡಿಕೊಂಡಿವೆ. ಈಗ ಮೈಸೂರು ಸ್ಯಾಂಡಲ್ಸೋಪ್ ಕೂಡ ಈ ನಟಿಯ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಎರಡು ವರ್ಷಗಳ ಕಾಲ ತಮನ್ನಾ ಜೊತೆ ಕರ್ನಾಟ ಸರ್ಕಾರ ಒಪ್ಪಂದ ಇರಲಿದೆ. ಇದಕ್ಕಾಗಿ ನಟಿಗೆ ಬರೋಬ್ಬರಿ 6.20 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುತ್ತೋಲೆ ವೈರಲ್ ಆಗಿದೆ.